ಕಲಬುರ್ಗಿ,ಜೂ.5- ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹಾಗೂ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ್ ಪಾಟೀಲ್ ಅವರು ಸುಮಾರು 167 ಕೋಟಿ ರೂ.ಗಳ ಅವ್ಯವಹಾರ ಎಸಗಿದ್ದಾರೆ ಎಂದು ಆರೋಪಿಸಿ, ಆ ಕುರಿತು ರಾಜ್ಯ ವಿಧಾನ ಪರಿಷತ್ ಹಂಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಹಾಗೂ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರೂ ಆಗಿರುವ ಸೇಡಂ ಶಾಸಕ ರಾಜ ಕುಮಾರ್ ಪಾಟೀಲ್ ತೆಲ್ಕೂರ್ ಅವರ ಸಂಭಾಷಣೆ ಎನ್ನಲಾದ ಸ್ಫೋಟಕ ಆಡಿಯೋವನ್ನು ಶನಿವಾರ ನಗರದ ಪತ್ರಿಕಾ ಭವನದಲ್ಲಿ ಜಾತ್ಯಾತೀತ ಜನತಾದಳದ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಕೃಷ್ಣಾರೆಡ್ಡಿ ಅವರು ಬಿಡುಗಡೆ ಮಾಡಿದರು.
ಸೇಡಂ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಅವರು ಹಂ ಗಾಮಿ ಸಭಾಪತಿ ರಘುನಾಥರಾವ್ ಮಲ್ಕಾಪುರೆ ಅವರೊಂದಿಗೆ ಮಾ ತನಾಡಿದರು ಎನ್ನಲಾದ ಆಡಿಯೋ ದಲ್ಲಿ ರೇವೂರ್ ಅವರು ಮಾಡಿದ ಅಕ್ರಮ ಹಾಗೂ ಅವ್ಯವಹಾರಗಳ ಕುರಿತು ಪ್ರಸ್ತಾಪವಾಗಿದೆ.
ಡಾ. ಡಿ.ಎಂ. ನಂಜುAಡಪ್ಪ ವರದಿ ಅನುಷ್ಠಾನಕ್ಕಾಗಿ ಪ್ರತಿ ಜಿಲ್ಲೆ ಹಾಗೂ ಪ್ರತಿ ತಾಲ್ಲೂಕಿಗೆ ಅನುದಾನ ಬಿಡುಗಡೆಯಲ್ಲಿಯೂ ಸಹ ಅಕ್ರಮ ಎಸಗಲಾಗಿದೆ. 2000ರೂ.ಗಳ ಬಿಲ್‌ಗೆ 8000ರೂ.ಗಳ ಬಿಲ್ ತೋರಿಸಲಾಗಿದೆ. 10,000ರೂ.ಗಳ ಬಿಲ್‌ಗೆ 50,000ರೂ.ಗಳನ್ನು ತೋರಿಸಲಾಗಿದೆ. ಅಲ್ಲದೇ ಒಂದು ಕೋಟಿ ರೂ.ಗಳ ಅನುದಾನ ಬಿಡುಗಡೆಗೆ 99 ಲಕ್ಷ ರೂ.ಗಳ ಬಿಲ್ ಮಾಡಿ ಗುತ್ತಿಗೆದಾರರಿಂದ ಶೇಕಡಾ 10ರಷ್ಟು ಕಮೀಷನ್ ಪಡೆದಿರುವ ಕುರಿತು ಆಡಿಯೋದಲ್ಲಿ ಬಹಿರಂಗಗೊAಡಿದೆ.
ತೆಲ್ಕೂರ್ ಅವರು ಮಾಡಿರುವ ಎಲ್ಲ ಆರೋಪಗಳ ಕುರಿತು ಆಡಿ ಯೋದಲ್ಲಿ ಕೇಳಿಸಿಕೊಂಡಿರುವ ಹಂಗಾಮಿ ಸಭಾಪತಿ ರಘುನಾಥ ರಾವ್ ಮಲ್ಕಾಪುರೆ ಅವರು ನಮ್ಮದೇ ಬಿಜೆಪಿ ಸರ್ಕಾರವಿದ್ದು, ಈ ವಿಷಯದ ಕುರಿತು ಸಭೆಯಲ್ಲಿ ಮಾತನಾಡಿದರೆ ಪಕ್ಷಕ್ಕೆ ಮುಜುಗುರ ಆಗುತ್ತದೆ. ಈ ಕುರಿತು ಈಗಾಗಲೇ ಯಾರ ಹತ್ತಿರವಾದರೂ ಮತನಾ ಡಿದ್ದೀಯಾ? ಎಂದು ಪ್ರಶ್ನಿಸಿದಾಗ ತೆಲ್ಕೂರ್ ಅವರು, ಈಗಾಗಲೇ ಆಳಂದ್ ಶಾಸಕ ಸುಭಾಷ್ ಗುತ್ತೇ ದಾರ್, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ್ ಮತ್ತಿಮೂಡ್ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಸೆಂಪುರ್ ಅವರಿಗೆ ಮಾತನಾಡಿ, ಸಭೆಯಲ್ಲಿ ಪ್ರಸ್ತಾಪಿಸುವ ಕುರಿತು ಕೇಳಿರುವೆ. ಅವರೂ ಸಹ ಒಪ್ಪಿಕೊಂಡಿದ್ದಾರೆ ಎಂದು ಹೇಳಿರು ವುದು ಆ ಆಡಿಯೋದಲ್ಲಿ ದಾಖಲಾಗಿದೆ.
ಅವ್ಯವಹಾರದ ಕುರಿತು ಶಹಾಪುರ ಕಾಂಗ್ರೆಸ್ ಶಾಸಕ ಶರಣಬಸಪ್ಪ ದರ್ಶನಾಪೂರ್, ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್ ಅವರೊಂದಿಗೂ ಮಾತನಾಡಿದ್ದು, ಅವರಿಗೂ ಸಹ ಸಭೆಯಲ್ಲಿ ಚರ್ಚಿಸಲು ಕೇಳಿಕೊಂಡಿರುವ ಕುರಿತು ಆಡಿಯೋ ಸಂಭಾಷಣೆಯಲ್ಲಿದೆ.
ರೇವೂರ್ ಅವರ ಅವ್ಯವಹಾರದ ಕುರಿತು 15 ಜನ ಶಾಸಕರೊಂದಿಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ತಿಳಿಸಿದಾಗ ಅವರು ಸಹ ಯೋಚನೆ ಮಾಡುವುದಾಗಿ ಹೇಳಿರು ವ ಕುರಿತು ಆಡಿಯೋ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ.
ಸುದೀರ್ಘ ಆಡಿಯೋ ಸಂಭಾಷಣೆ ಮುಗಿದ ನಂತರ ಕೃಷ್ಣಾರೆಡ್ಡಿ ಅವರು ಮಾತನಾಡಿ, ಬಿಜೆಪಿ ಸರ್ಕಾರದಲ್ಲಿ ವ್ಯಾಪಕ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಶೇಕಡಾ 40ರಷ್ಟು ಕಮೀಷನ್ ದಂಧೆ ಇದೆ. ಪಿಎಸ್‌ಐ ಅಕ್ರಮ ನೇಮಕಾತಿಯಲ್ಲಿ ಭಾಗಿಯಾದ ದಿವ್ಯಾ ಹಾಗರಗಿಯವರು ಬಿಜೆಪಿಯವರಲ್ಲ ಎಂದು ಆ ಪಕ್ಷದ ನಾಯಕರು ಹೇಳಿದ್ದಾರೆ. ಹೀಗಾಗಿ ಈಗ ಬಿಜೆಪಿ ಶಾಸಕ ರೇವೂರ್ ಅವರ ವಿರುದ್ಧದ ಆಡಿಯೋ ಸಂಭಾಷಣೆಯನ್ನೂ ಸಹ ಆ ಪಕ್ಷದ ನಾಯಕರು ಒಪ್ಪುವುದು ಕಷ್ಟ ಎಂದು ಹೇಳಿದರು. ರೇವೂರ್ ಅವರ ವಿರುದ್ಧದ ಅವ್ಯವಹಾರದ ಆಡಿಯೋ ಸಂಭಾಷಣೆ ಬಿಡುಗಡೆ ಮಾಡಿರುವುದರಿಂದ ನನಗೆ ಜೀವ ಬೆದರಿಕೆ ಬರುವ ಶಂಕೆ ಇದೆ ಎಂದು ಅನುಮಾನ ಹೊರಹಾಕಿದ ಅವರು, ಅವ್ಯವಹಾರ ಕುರಿತಾದ ಆಡಿಯೋ ಇದ್ದ ಮೊಬೈಲ್ ಹಾಗೂ ಲೆದರ್ ಬ್ಯಾಗ್ ಹಾಗೂ ಹಲವು ದಾಖಲೆಗಳು ರಾಯಚೂರಿಗೆ ಬರುವಾಗ ರೈಲಿನಲ್ಲಿ ಕಳುವಾಗಿತ್ತು. ತಕ್ಷಣವೇ ರಾಯಚೂರಿನಲ್ಲಿ ಆ ಕುರಿತು ದೂರು ಸಲ್ಲಿಸಿರುವೆ ಎಂದು ಕೃಷ್ಣಾರೆಡ್ಡಿ ಅವರು ತಿಳಿಸಿದರು.
ನನಗೆ ಜೀವ ಭಯ ಇದೆ. ಕೂಡಲೇ ರಕ್ಷಣೆ ಕೊಡುವುದರ ಜೊತೆಗೆ ಆಡಿಯೋ ಸಂಭಾಷಣೆಯಲ್ಲಿರುವ ಅವ್ಯವಹಾರದ ಕುರಿತು ಸಿಬಿಐ ತನಿಖೆಗೆ ಒಪ್ಪಿಸಿ, ಆರೋಪಿಗಳನ್ನು ಬಂಧಿಸಬೇಕು ಎಂದು ಆಗ್ರಹಿಸಿದ ಅವರು, ತನಿಖೆಯ ವೇಳೆ ಆಡಿಯೋ ಸಂಭಾಷಣೆ ಸುಳ್ಳಾಗಿದ್ದಲ್ಲಿ ನಾನು ಜೈಲಿಗೆ ಹೋಗಲೂ ಸಹ ಸಿದ್ಧ ಎಂದು ಹೇಳಿದರು. ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶಿವಾಜಿ, ನಾಗರಾಜ್, ಶಿವಲಿಂಗ ಪಾಟೀಲ್ ಅವರು ಉಪಸ್ಥಿತರಿದ್ದರು.
Home Featured Kalaburagi ರೇವೂರ್ ವಿರುದ್ಧ 167 ಕೋಟಿ ರೂ.ಗಳ ಅವ್ಯವಹಾರ: ಹಂಗಾಮಿ ಸಭಾಪತಿ, ಬಿಜೆಪಿ ಶಾಸಕರ ಸ್ಫೋಟಕ...