ಕಲಬುರಗಿ,ಮಾ.10:ಜಿಲ್ಲೆಯಾದ್ಯಂತ ಕಳೆದ ಫೆಬ್ರವರಿ ಮಾಹೆಯಲ್ಲಿ ಕಂದಾಯ ಇಲಾಖೆಯ ನ್ಯಾಯಾಲಯಗಳಲ್ಲಿ ವಿವಿಧ ಕಾಯ್ದೆ ಕಲಂಗಳಡಿ ದಾಖಲಾದ ಅರೆ ನ್ಯಾಯಾಲಯ ಪ್ರಕರಣಗಳ ಪೈಕಿ ಬಾಕಿಯಿದ್ದ 2067 ಭೂಮಿ ಪ್ರಕರಣಗಳಲ್ಲಿ 931 ಪ್ರಕರಣಗಳನ್ನು ದಾಖಲೆ ಪ್ರಮಾಣದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದರು.
ಗುರುವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಂದಾಯ ಇಲಾಖೆಯ ತಹಶೀಲ್ದಾರ, ಸಹಾಯಕ ಆಯುಕ್ತರು ಹಾಗೂ ಜಿಲ್ಲಾಧಿಕಾರಿಗಳ ಹಂತದ ನ್ಯಾಯಾಲಯಗಳಲ್ಲಿ ಪಹಣಿ, ಪೋಡಿ ಹೀಗೆ ಜಮೀನಿಗೆ ಸಂಬAಧಿಸಿದ ಪ್ರಕರಣಗಳನ್ನು ಅದ್ಯತೆ ಮೇಲೆ ವಿಲೇವಾರಿ ಮಾಡಲಾಗಿದೆ. ಇದು ಜಿಲ್ಲೆಯ ಮಟ್ಟಕ್ಕೆ ಐತಿಹಾಸಿಕ ದಾಖಲಾಗಿದೆ ಎಂದರು.
ಇನ್ನು ಬಾಕಿಯಿರುವ 1136 ಪ್ರಕರಣಗಳನ್ನು ಸಹ ಮುಂದಿನ 2 ತಿಂಗಳಲ್ಲಿ ವಿಲೇವಾರಿ ಮಾಡಲಾಗುವುದು. ವಿಲೇವಾರಿ ಮಾಡಲಾದ ಪ್ರಕರಣಗಳಲ್ಲಿ 2013 ರಿಂದಲು ಬಾಕಿ ಇದ್ದವು ಎಂದರು.
ಉಕ್ರೇನ್ ದಿಂದ ಆರು ಜನ ತಾಯ್ನಾಡಿಗೆ;
ಯುದ್ಧಪೀಡಿತ ಉಕ್ರೇನ್ ನಲ್ಲಿ ಸಿಲುಕಿದ ಜಿಲ್ಲೆಯ ಆರು ಜನ ಪೈಕಿ ನಾಲ್ವರು ಕಲಬುರಗಿಗೆ ಮರಳಿದ್ದು, ಇಬ್ಬರು ಬೀದರ ಜಿಲ್ಲೆಗೆ ವಾಪಸ್ಸಾಗಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಗೆ ಡಿ.ಸಿ. ತಿಳಿಸಿದರು.
Home Featured Kalaburagi ಬಾಕಿಯಿರುವ 2067 ಭೂಮಿ ಪ್ರಕರಣಗಳಲ್ಲಿ 931 ಇತ್ಯರ್ಥ: ಜಿಲ್ಲೆಯಲ್ಲಿ ಐತಿಹಾಸಿಕ ದಾಖಲೆ:ಡಿಸಿ