ಸಾಲಬಾಧೆ ರೈತ ಆತ್ಮಹತ್ಯೆ

0
669

ಸೇಡಂ,ಡಿ,17 : ತಾಲೂಕಿನ ಸಟಪಟನಹಳ್ಳಿ ಗ್ರಾಮದ ರೈತ ಬಸವರಾಜ ರೇವಣಸಿದ್ದಪ್ಪ ಅವರಾದಿ ( 29 ) ಗುರುವಾರ ಸಾಲಬಾಧೆಗೆ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ಪ್ರಗತಿ ಗ್ರಾಮೀಣ ಬ್ಯಾಂಕ್ ನಲ್ಲಿ 2 ಲಕ್ಷ , ಜಿಲ್ಲಾ ಸಹಕಾರಿ ಬ್ಯಾಂಕ್‌ನಲ್ಲಿ 99 ಸಾವಿರ ರೂ . ಸೇರಿ ಖಾಸಗಿಯಾಗಿಯೂ ಮಾಡಿಕೊಂಡಿದ್ದ ಸಾಲ ಎನ್ನಲಾಗಿದೆ . ಕಳೆದ 2-3 ವರ್ಷಗಳಿಂದ ಸಮರ್ಪಕ ಬೆಳೆ ಇಲ್ಲದಿರುವುದರಿಂದ ಸಾಲ ತೀರಿಸಲು ಸಾಧ್ಯವಾಗಿರಲಿಲ್ಲ . ಇದರಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಸೇಡಂ ಠಾಣೆಯಲ್ಲಿ ಪ್ರಕರಣ ದಾಖಳುಮಾಡಿಕೊಳ್ಳಲಾಗಿದೆ.

LEAVE A REPLY

Please enter your comment!
Please enter your name here