ಅಸಂವಿಧಾನಿಕ ಪದ ಬಳಸುತ್ತಿರುವ ಕಾಂಗೈಗೆ ಮತದಾರರಿoದ ತಕ್ಕ ಉತ್ತರ :ಸಚಿವ ಈಶ್ವರಪ್ಪ

0
690

ಕಲಬುರಗಿ:ಅ.24: ಕಾಂಗ್ರೆಸ್ ನವರು ಡಿಕ್ಷನರಿಯಲ್ಲಿ ಇಲ್ಲದಿರುವ, ಬೇಡದಿರುವಂತಹ ಪದಗಳನ್ನು ಬಳಸುತ್ತಿದ್ದಾರೆ. ಇದನ್ನು ಮತದಾರರು ಗಮನಿಸುತ್ತಿದ್ದು, ಅವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ಕಲಬುರಗಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮೋದಿ ಅವರನ್ನು ಹೆಬ್ಬೆಟ್ಟು ಗಿರಾಕಿ ಎಂಬ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದರು.
ಪ್ರಧಾನಿ ಮೋದಿಯವರು ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಜನ ಗಮನಿಸುತ್ತಿದ್ದಾರೆ. ನೂರು ಕೋಟಿ ವ್ಯಾಕ್ಸಿನೇಷನ್ ಸಾಧನೆಗೆ ಇಡೀ ಪ್ರಪಂಚವೇ ಮೆಚ್ಚುಗೆ ವ್ಯಕ್ತಪಡಿಸುತ್ತಿದೆ.
ಪ್ರಧಾನಿ ದೇಶದ ವಿಜ್ಞಾನಿಗಳಿಗೆ, ವೈದ್ಯರಿಗೆ, ಆರೋಗ್ಯ ಸಿಬ್ಬಂದಿಗೆ ಹಾಗು ಡಿ ಗ್ರೂಪ್ ನೌಕರಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಆದರೆ ಕಾಂಗ್ರೆಸ್??ನವರು ವಿನಾಕಾರಣ ಟೀಕೆ ಮಾಡುತ್ತಿದ್ದಾರೆ.
ಹೀಗಾಗಿ ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರು ಬಿಜೆಪಿ ಗೆಲುವು ಸಾಧಿಸಲಿದೆ. ಕಾಂಗ್ರೆಸ್‌ನವರ ವರ್ತನೆಗೆ ಜನರು ಉತ್ತರ ಕೊಡಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಭಾರತ-ಪಾಕಿಸ್ತಾನ ಟಿ-20 ಕ್ರಿಕೆಟ್ ಪಂದ್ಯ ಹಿನ್ನೆಲೆಯಲ್ಲಿ ಮಾತನಾಡುತ್ತಾ, ನಮ್ಮಲ್ಲೂ ಕೆಲ ರಾಷ್ಟ್ರದ್ರೋಹಿಗಳು ಕ್ರಿಕೆಟ್??ನಲ್ಲೂ ಪಾಕಿಸ್ತಾನ ಪರ ಇದ್ದಾರೆ. ಆಟವನ್ನು ಆಟದ ರೀತಿಯಲ್ಲಿಯೇ ನೋಡಬೇಕು.
ಆದರೆ, ಆಟದಲ್ಲಿಯೂ ದ್ವೇಷ ಕಾಣುವ ಅವಶ್ಯಕತೆ ಇಲ್ಲ. ಕ್ರೀಡಾಪಟುಗಳ ಶ್ರಮಕ್ಕೆ ನಾನು ಹಾರೈಸುತ್ತೇನೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.

LEAVE A REPLY

Please enter your comment!
Please enter your name here