ರೈತರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಾಲ ಪಡೆದ ಕಾರ್ಯದರ್ಶಿಗೆ ರೈತರಿಂದ ಥಳಿತ

0
784

ಜೇವರ್ಗಿ, ಸೆ. 09: ನಕಲಿ ಸಹಿ ಮಾಡಿದ ರೈತರ ಹೆಸರಿನಲ್ಲಿ ಸಾಲ ಪಡೆದ ಸಹಕಾರ ಸಂಘದ ಕಾರ್ಯದರ್ಶಿಯೋರ್ವನನ್ನು ರೈತರು ಬಟ್ಟೆ ಬಿಚ್ಚಿ ಮನಬಂದAತೆ ಥಳಿಸಿದ್ದ ಘಟನೆ ತಾಲೂಕಿನ ಯಲಕಗೋಂಡದಲ್ಲಿ ನಡೆದಿದೆ.
ಯಲಗೊಂಡ ಸಹಕಾರಿ ಸಂಘದ ಕಾರ್ಯದರ್ಶಿ ರಾಯಪ್ಪ ಯಲಗೊಂಡ ಎಂಬವನೇ ರೈತರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಸಾಲ ಪಡೆದ ಭೂಪ ನಾಗಿದ್ದಾನೆ.
ರೈತರ ಹೆಸರಿನಲ್ಲಿ ನಕಲಿ ಸಹಿ ಮಾಡಿ ಲಕ್ಷಾಂತರ ರೂಪಾಯ ಪಡೆದ ಬಗ್ಗೆ ಸಾರ್ವಜನಿಕರು, ರೈತರು ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗ ಹಿನ್ನೆಲೆಯಲ್ಲಿ ರಸ್ತೆಯ ಮಧ್ಯದಲ್ಲಿಯೇ ಕಾರ್ಯದರ್ಶಿಯ ಬಟ್ಟೆ ಬಿಚ್ಚಿ ಮನಬಂದAತೆ ಥಳಿಸಿದರು.
ಪೋಲಿಸರ ಮಧ್ಯಸ್ಥಿತಿಕೆಯಿಂದ ಪರಿಸ್ಥಿತಿ ತಿಳಿಗೊಂಡಿದ್ದು, ನಂತರ ಈ ಬಗ್ಗೆ ಜೇವರ್ಗಿ ಪೋಲಿಸ ಠಾಣಾ ವ್ಯಾಪ್ತಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ

LEAVE A REPLY

Please enter your comment!
Please enter your name here