ಕಾಂಗ್ರೆಸ್ಗೆ ಅಧಿಕಾರಕ್ಕೆ ಬರಲು ಹಗಲುಗನಸು ಕಾಣುವ ನೈತಕತೆ ಇಲ್ಲ:ಸಿಟಿ ರವಿ

0
662

ಕಲಬುರಗಿ, ಆಗಸ್ಟ. 31: ಕಲಬುರಗಿ ಸೇರಿದಂತೆ ರಾಜ್ಯದ ಮೂರು ಮಹಾನಗರಪಾಲಿಕೆಗಳಲ್ಲಿ ಭಾರತೀಯ ಜನತಾ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಬಿಜೆಪಿ ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಅವರು ಭವಿಷ್ಯ ನುಡಿದಿದ್ದಾರೆ.
ಅವರಿಂದಿಲ್ಲಿ ಮಹಾನಗರಪಾಲಿಕೆಗಳ ಚುನಾವಣೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತ, ಚುನಾವಣೆಗಳು ಬಂದಾಗ ಸಿದ್ಧರಾಮಯ್ಯನವರು ರೆಸ್ಟ್ ಮಾಡಲು ಹೋಗುವುದಲ್ಲದೇ ಅಲ್ಲಿಂದ ಕೆಲವು ಸಂದೇಶಗಳನ್ನು ಕೊಡುತ್ತಾರೆ, ಒಟ್ಟಿನಲ್ಲಿ ಕಾಂಗ್ರೆಸ್ ಗೆಲ್ಲಬಾರದು ಎಂದು ಈಗ ಸಧ್ಯ ಜಿಂದಾಲ್ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಅವರು ವಿಶ್ರಾಂತಿ ಪಡೆಯುತ್ತಿದ್ದು, ಈಗ ಮತ್ತೇ ಅವರು ಇದನ್ನೇ ಮಾಡುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.

ಕೆಲವೊಮ್ಮೆ ಸಿದ್ಧರಾಮಯ್ಯನವರೇ ನೇರವಾಗಿ ಸಂದೇಶ ಕೊಡ್ತಾರೆ, ಕೆಲವೊಮ್ಮೆ ಹಿಂಬಾಲಕರ ಮೂಲಕ ಸಂದೇಶ ರವಾನಿಸುತ್ತಾರೆ, ಆದರೆ ಈ ಬಾರಿ ಡಿ.ಕೆ. ಶಿವಕುಮಾರ ನೇತೃತ್ವದಲ್ಲಿ ಚುನಾವಣೆ ಗೆಲ್ಲಬಾರದೆಂಬ ಸಂದೇಶ ನೀಡಿದ್ದಾರೆ ಎಂದು ಹೇಳಿದರು.

ಕಳೆದ 20 ವರ್ಷದಿಂದ ಕಾಂಗ್ರೆಸ್ ಪಕ್ಷ ಹೊಸ ಅಧ್ಯಕ್ಷರ ಹುಡುಕಾಟದಲ್ಲಿ ನಿರತವಾಗಿದೆ, ರಾಜ್ಯದ ಕಾಂಗ್ರೆಸ್ ಅಧ್ಯಕ್ಷರಿಗೆ ಇನ್ನೂ ಕೂಡ ತಂಡ ಕಟ್ಟಿಕೊಳ್ಳೋಕೆ ಆಗ್ತಿಲ್ಲ, ಪಕ್ಷದ ತಂಡವನ್ನೇ ಕಟ್ಟಿಕೊಳ್ಳೊಕ್ಕೆ ಆಗದಿರೋರು ಅಧಿಕಾರಕ್ಕೆ ಬರಲು ಹಗಲುಗನಸು ಕಾಣುವ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

LEAVE A REPLY

Please enter your comment!
Please enter your name here