ಕಾಂಗ್ರೆಸ್ ಮಹಾನಗರಪಾಲಿಕೆ ಚುಣಾವಣೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮುಸ್ಲಿಂರಿಗೆ 21, ಲಿಂಗಾಯಿತರಿಗೆ 9 ಸೀಟುಗಳ ಹಂಚಿಕೆ

0
1653

ಕಲಬುರಗಿ, ಆಗಸ್ಟ. 23: ಕುತೂಹಲ ಕೆರಳಿಸಿರುವ ಮಹಾನಗರಪಾಲಿಕೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆಯ ಕಸರತ್ತು ನಡೆಸಿ ಇಂದು ಮುಂಜಾನೆ 11 ಗಂಟೆಗೆ ಕ್ರಾಂಗ್ರೆಸ್ ತನ್ನ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಬಿಡುಗಡೆ ಮಾಡಿದೆ.
ಒಟ್ಟು 55 ವಾರ್ಡುಗಳ ಮಹಾನಗರಪಾಲಿಕೆಯಲ್ಲಿ ಮುಸ್ಲಿಂ ಜನಾಂಗಕ್ಕೆ ಬಂಪರ್ ಸೀಟುಗಳು ಲಭ್ಯವಾಗಿದ್ದು, ಸಹಜವಾಗಿಯೇ ಕಲಬುರಗಿ ಉತ್ತರದಲ್ಲಿ ಮುಸ್ಲಿಂ ಶಾಸಕರಿದ್ದು ಈ ನಿಟ್ಟಿನಲ್ಲಿ ಆ ಜನಾಂಗಕ್ಕೆ 21 ಸ್ಥಾನಗಳನ್ನು ಕಲಬುರಗಿ ದಕ್ಷಿಣ ಮತ್ತು ಉತ್ತರ ಮತಕ್ಷೇತ್ರ ಸೇರಿ ನೀಡಲಾಗಿದೆ.
ಇನ್ನು ಬಹುಸಂಖ್ಯಾತ ಲಿಂಗಾಯಿತ ಕೋಮಿಗೆ 9 ಸ್ಥಾನಗಳನ್ನು ಮತ್ತು ರೆಡ್ಡಿ ಜನಾಂಗಕ್ಕೆ 3 ಸ್ಥಾನಗಳನ್ನು ಬ್ರಾಹ್ಮಣ ಜನಾಂಗಕ್ಕೆ ಕೇವಲ ಒಂದೇ ಒಂದು ಸ್ಥಾನ ನೀಡಲಾಗಿದೆ ಇನ್ನು ಉಳಿದಂತೆ ಎಸ್ಸಿ ಕೋಟಾದಲ್ಲಿ ಎಚ್. ಪಂಗಡಕ್ಕೆ 6, ಎಮ್. ಪಂಗಡಕ್ಕೆ 1, ಲಂಬಾಣಿ ಮತ್ತು ವಡ್ಡರ ಜನಾಂಗಕ್ಕೆ ತಲಾ ಒಂದೊAದು ಸ್ಥಾನ ನೀಡಲಾಗಿದೆ.

ಬಿಜೆಪಿಯಲ್ಲೂ ಲಿಂಗಾಯಿತರಿಗೆ 12 ಸ್ಥಾನಗಳನ್ನು ಮತ್ತು ಮುಸ್ಲಿಂ ಜನಾಂಗಕ್ಕೆ 10 ಸ್ಥಾನಗಳನ್ನು ಬ್ರಾಹ್ಮಣ ಸಮುದಾಯಕ್ಕೆ ಒಂದು ಸ್ಥಾನ ನೀಡಲಾಗಿದೆ.

LEAVE A REPLY

Please enter your comment!
Please enter your name here