ಮುಖ್ಯಮಂತ್ರಿ ಸ್ಥಾನಕ್ಕೆ ಯುಡಿಯೂರಪ್ಪ ರಾಜೀನಾಮೆ

0
1187

ಬೆಂಗಳೂರು, ಜುಲೈ. 26: ಹಲವಾರು ಉಹಾಪೋಹಗಳ ನಂತರ ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಅವರು ಇಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ತಮ್ಮ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರಾಜಭವನಕ್ಕೆ ಹೋಗಿ ಸಲ್ಲಿಸಿದ್ದಾರೆ.
ಇಂದು ಜುಲೈ 26 ರಂದು ತಮ್ಮ ಸರ್ಕಾರವು ರಾಜ್ಯದಲ್ಲಿ ಎರಡು ವರ್ಷಗಳನ್ನು ಪೂರೈಸಿದಾಗ ಕರ್ನಾಟಕ ಸಿಎಂ ಆಗಿ ತಮ್ಮ ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವುದಾಗಿ ನಿನ್ನೆಯಷ್ಟ್ಟೆ ಮುಖ್ಯಮಂತ್ರಿಗಳು ಘೋಷಿಸಿದ್ದರು.
ಪಕ್ಷದಲ್ಲಿ 75 ವರ್ಷ ವಯಸ್ಸು ಮೀರಿದವರಿಗೆ ಯಾವುದೇ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರೆಯುವ ನಿಯಮ ನಮ್ಮ ಪಕ್ಷದಲ್ಲಿ ಇಲ್ಲದಿದ್ದರೂ ನನ್ನ ಮೇಲಿ ನಂಬಿಕೆಯಿಟ್ಟು ಪಕ್ಷದ ಕಟ್ಟಳೆಗಳನ್ನು ಮೀರಿ ಪ್ರಧಾನಿ ನರೇಂದ್ರ ಮೋದಿಜಿ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮೀತಶಾ ಅವರನ್ನು ನಾನು ಹೃದಯಪೂರ್ವಕವಾಗಿ ಅಭಿನಂದಿಸುತ್ತೇನೆ ಎಂದು ರಾಜೀನಾಮೆ ಘೋಷಿಸುವ ಮುನ್ನ ಮುಖ್ಯಮಂತ್ರಿಗಳು ಹೇಳಿದರು.
ನಿನ್ನೆಯಷ್ಟು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕರ್ನಾಟಕ ಸಿಎಂ ಅವರನ್ನು “ಉತ್ತಮ ಕೆಲಸ” ಮಾಡಿದ್ದಾರೆ ಎಂದು ಶ್ಲಾಘಿಸಿದ್ದು, ಅವರ ಕೆಲಸದ ಬಗ್ಗೆ ಯಾವುದೇ ಒಂದು ಮಾತಿಲ್ಲ, ಆದರೆ ಅವರ ವಯಸ್ಸು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಯುವಂತೆ ಮಾಡಿದೆ.

LEAVE A REPLY

Please enter your comment!
Please enter your name here