- ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತ್ಮಾಕ ಅನುಮೋದನೆ
- ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರ ಪ್ರಯತ್ನಕ್ಕೆ ಸಿಕ್ಕ ಪ್ರತಿಫಲ
- ₹ 6376 ಲಕ್ಷ ವೆಚ್ಚದಲ್ಲಿ ಯೋಜನೆ ಆರಂಭ
- ಪಿಪಿಪಿ ಮಾದರಿಯಲ್ಲಿ ಯೋಜನೆ ಅನುಷ್ಠಾನ
- ಶೇ 50- 50 ಅನುಪಾತದಲ್ಲಿ ಯೋಜನೆ ನಿರ್ಮಾಣ
ಬೆಂಗಳೂರು, ಮೆ.27- ಕಲ್ಬುರ್ಗಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಾಗರಗಾ ಗ್ರಾಮದಲ್ಲಿ 6,376 ಲಕ್ಷಗಳ ಅಂದಾಜು ವೆಚ್ಚದಲ್ಲಿ ವಸತಿ ಯೋಜನೆ ನಿರ್ಮಾಣ ಮಾಡಲು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಆಡಳಿತ್ಮಾಕ ಅನುಮೋದನೆ ನೀಡಲಾಗಿದೆ.
ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ಅವರ ಸತತ ಪ್ರಯತ್ನದ ಫಲದಿಂದ ಹಾಗರಗಾ ಗ್ರಾಮದಲ್ಲಿ ಶೇ.50-50 ರೈತರ ಸಹಭಾಗಿತ್ವದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಸಂಪುಟ ಸಭೆ ಒಪ್ಪಿಗೆ ಸೂಚಿಸಿತು.
ಕಲ್ಬರ್ಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಹಾರಗ ಗ್ರಾಮದ ಸರ್ವೇ ನಂ.213/1, 214/1, 215/123, 4 6 7 , 2016/ 123, 218/6 ಮತ್ತು 7, 228/2 ಸೇರಿದಂತೆ ಒಟ್ಟು 107 ಎಕರೆ 5 ಗುಂಟೆ ಕರಾಬ್ ಜಮೀನಿನಲ್ಲಿ ರೈತರ ಸಹಭಾಗಿತ್ವದಡಿ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿದೆ.
ಸದರಿ ಜಮೀನನ್ನು ವಸತಿ ಯೋಜನೆಗೆ ಬಿಟ್ಟುಕೊಡಲು ರೈತರು ಒಪ್ಪಿಕೊಂಡಿದ್ದು, ಈಗಾಗಲೇ ಒಡಂಬಡಿಕೆಯನ್ನೂ ಸಹ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಯೋಜನೆಗೆ 1:9.15ರ ಅನುಪಾತದಲ್ಲಿ ಒಟ್ಟು 17200 ಅರ್ಜಿಗಳು ಸ್ವೀಕೃತವಾಗಿದ್ದು, ವಸತಿ ಯೋಜನೆಯನ್ನು Rs 76 ಕೋಟಿ ಮೊತ್ತದ ವೆಚ್ಚದಲ್ಲಿ ನಗರಾಭಿವೃದ್ಧಿ ಆಯುಕ್ತರು 14-04-2015 ಮತ್ತು 23-12-2017ರಂದು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.
ವಸತಿ ಯೋಜನೆಯು ರಾಜ್ಯ ಹೆದ್ದಾರಿ ಮತ್ತು ಸಂಪರ್ಕ ರಸ್ತೆಯು ಇರುತ್ತದೆ. ಜಮೀನಿನ ಸುತ್ತಮುತ್ತ ಹಲವಾರು ಖಾಸಗಿ ವಿನ್ಯಾಸಗಳು ಮತ್ತು ಇತರೆ ಬೆಳವಣಿಗೆಗಳು ಬಂದಿರುತ್ತವೆ. ಸದರಿ ಪ್ರದೇಶವು ಹಾಲಿ ವರ್ತುಲ ರಸ್ತೆಗಳಿಂದ 3 ಕಿ.ಮೀ ದೂರದಲ್ಲಿದ್ದು, ವಸತಿ ಬಡಾವಣೆಗಳಿಗೆ ಸೂಕ್ತವಾಗಿದ್ದು, ಮೂಲಭೂತ ಸೌಕರ್ಯಗಳಾದ ನೀರು, ಒಳಚರಂಡಿ, ವಿದ್ಯುತ್ ಸೌಲಭ್ಯ ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಲು ಅನುಕೂಲವಾಗಲಿದ ಎಂದರು.
117 ಎಕರೆ 5 ಗುಂಟೆ ಜಮೀನಿನಲ್ಲಿ ಯೋಜನೆ ಕೈಗೊಳ್ಳಲು ಉದ್ದೇಶಿಸಿರುವುದರಿಂದ ನಗರದ ಯೋಜಿತ ಬೆಳವಣಿಗೆಗೆ ಪೂರಕವಾಗಿದ್ದು, ಈ ಯೋಜನೆಯನ್ನು ನಿವೇಶನ ರಹಿತ ನಾಗರಿಕರಿಗೆ ಅಥವಾ ಸಾರ್ವಜನಿಕರಿಗೆ ಹಂಚಿಕೆ ಮಾಡುವ ಸಲುವಾಗಿ ಪ್ರಸ್ತಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.