ಬೆಳಿಗ್ಗೆ 6 ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ

    0
    784

    ಬೆಂಗಳೂರು, ಏ. 26: ಅಗತ್ಯವಸ್ತುಗಳನ್ನು ಖರೀದಿಸಲು ಸರಕಾರ ನಾಳೆಯಿಂದ ಬೆಳಿಗ್ಗೆ 6 ರಿಂದ 10ಗಂಟೆಯವರೆಗೆ ಅವಕಾಶ ನೀಡಿದ್ದು, ಕಟ್ಟುನಿಟ್ಟಾಗಿ ಮುಂದಿನ ದಿನದ 20 ಗಂಟೆಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ.
    ಅವಶ್ಯಕ ವಸ್ತುಗಳಾದ ದಿನಸಿ ಪದಾರ್ಥಗಳು, ಹಾಲು, ಹಣ್ಣು, ತರಕಾರಿಗಳು ಸೇರಿವೆ.
    ಏಪ್ರಿಲ್ 27ರ ರಾತ್ರಿ 9 ಗಂಟೆಯಿAದ 14 ದಿನಗಳ ಕಾಲ ರಾಜ್ಯ ದಾದ್ಯಂತ ಕಟ್ಟುನಿಟ್ಟಿನ ಕೊರೊನಾ ಕರ್ಫ್ಯೂ ಜಾರಿಗೆ ಬರಲಿದ್ದು, ರಾಜ್ಯ ಸಾರಿಗೆ ಬಸ್ ಸೇವೆ ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರವನ್ನು ಈ ಲಾಕ್‌ಡೌನ್ ಅವಧಿಯಲ್ಲಿ ನಿಷೇಧಿಸಲಾಗಿದೆ.
    ಬಂದ್ ಸಮಯದಲ್ಲಿ ಯಾವುದೇ ಅಂಗಡಿ, ಮುಂಗಟ್ಟುಗಳು, ಸೇರಿದಂತೆ ಯಾವುದೇ ವಾಣಿಜ್ಯ ಚಟುವಟಿಕೆಗಳನ್ನು ಸಹ ಬಂದ್ ಆಗಲಿವೆ.
    ಆದರೆ ಗೂಡ್ಸ್ ವಾಹನಗಳ ಸಂಚಾರಕ್ಕೆ ರಾಜ್ಯದಲ್ಲಿ ಅಡ್ಡಿಯಿಲ್ಲ ಅಲ್ಲದೇ ಹೊರ ರಾಜ್ಯದ ಸಾರಿಗೆ ಸಂಚಾರಕ್ಕೂ ಸರಕಾರ ಯಾವುದೇ ನಿರ್ಭಂಧ ವಿಧಿಸಿಲ್ಲ.

    LEAVE A REPLY

    Please enter your comment!
    Please enter your name here