ಕಲಬುರಗಿ, ಏ. 25: ಅಹಿಂಸೋ ಪರಮೋಧರಂ ಎಂಬ ವಾಕ್ಯವನ್ನು ಭಗವಾನ ಮಹಾವೀರ ಅವರು 18 ಶತಮಾನಗಳ ಹಿಂದೆಯೇ ಪ್ರಾಣಿ ಹಿಂಸೆ ಮಾಡಬಾರದೆಂದು ಜಗಕ್ಕೆ ಸಾರಿದ ದಿನದಂದೆ ನಗರದಲ್ಲಿ ಲಾಕ್‌ಡೌನ್ ಇದ್ದರೂ ಸಹ ರಾಜಾರೋಶವಾಗಿ ಮಾಂಸ ಮಾರಾಟ ಮಾಡಿದ್ದು ಭಗವಾನ ಮಹಾವೀರರಿಗೆ ಮಾಡಿದ ಅಪಚಾರವಾಗಿದೆ.
ನಗರದ ಸೇಡಂ ರಸ್ತೆಯ ಆರ್.ಟಿ.ಓ. ಹಳೆ ಜೇವರ್ಗಿ ರಸ್ತೆಯ ಎಸ್‌ಬಿಎಚ್ ಬ್ಯಾಂಕ್ ಹತ್ತಿರ, ಸಂಗತ್ರಾಸವಾಡಿಯ ಮುಖ್ಯ ಬೀದಿಯಲ್ಲಿ ಹಾಗೂ ಗಂಜ ಪ್ರದೇಶ, ಹಮಾಲವಾಡಿ, ಬ್ರಹ್ಮಪೂರ ಲಾಳಗೇರಿ ಬಡಾವಣೆಯಗಳಲ್ಲಿ ಜನರು ರೇಷನ್ ಅಂಗಡಿ ಮುಂದೆ ನಿಂತ ಹಾಗೆ ಮಾಂಸ ಖರೀದಿಸಲು ನಿಂತಿದ್ದು, ಅಂಗಡಿಯವರು ಬಿಂದಾಸ್ ಆಗಿ ತೆರೆದು ವ್ಯಾಪಾರ ಮಾಡುತ್ತಿದ್ದ ದೃಶ್ಯಗಳು ನೋಡಗರಿಗೆ ಕೂಡ ಅಸಹ್ಯವೆನಿಸುವಂತಿತ್ತು.
ಭಗವಾನ ಮಹಾವೀರ ಜಯಂತಿಯAದು ಯಾವುದೇ ದಿನಬರಲಿ ಅಂದು ರಾಜ್ಯದಾದ್ಯಂತ ಮಟನ್, ಚಕನ್ ಮಾರಾಟ ಮಾಡುವುದನ್ನು ನಿಷೇಧಿಸಲಾಗಿದೆ. ಆದರೆ ಇಂದು ಲಾಕ್‌ಡೌನ್ ಇದ್ದರೂ ಯಾವುದೇ ಅಂಗಡಿ ತೆರೆಯದಿದ್ದರೂ ಮಾಂಸದ ಅಂಗಡಿ ತೆರೆದಿದ್ದು ನಿಜಕ್ಕೂ ಆಶ್ಚರ್ಯವೇನಿಸುತ್ತದೆ.
ಅಧಿಕಾರಿಗಳು ಕಣ್ಣಿದ್ದರೂ ಕುರುಡುತನ ಪ್ರದರ್ಶಿಸಿದ್ದು, ನಾಚಿಗೇಡಿತನ ಸಂಗತಿ.