

ಕಲಬುರಗಿ, ಏ. 22: ಚಿತ್ತಾಪೂರ ತಾಲೂಕಿನ ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆಯ ಪ್ರಮುಖ ಶಕ್ತಿಪೀಠ ಹಾಗೂ ಧಾರ್ಮಿಕ ಕೇಂದ್ರ ಶ್ರೀ ಕ್ಷೇತ್ರ ಸನ್ನತಿ ಶ್ರೀ ಚಂದ್ರಲಾಪರಮೇಶ್ವರಿ ದೇವಿಯ ಜಾತ್ರಾ ಮಹೋತ್ಸವವು ಈ ಬಾರಿ ಕೋವಿಡ್ ಕಾರಣದಿಂದಾಗಿ ಪ್ರತಿ ದಿವಸದ ಕಾರ್ಯಕ್ರಮಗಳು, ಉತ್ಸವ ಜಾತ್ರೆ ನಡೆಸುವುದನ್ನು ನಿಷೇಧಿಸಿ ದೇವಸ್ಥಾನ ಮಂಡಳಿ ಪ್ರಕಟಣೆ ಹೊರಡಿಸಿದೆ.
ಇದೇ ತಿಂಗಳು 26 ರಇಂದ ಮೇ 4, 2021 ಚೈತ್ರ ಮಾಸ ಕೃಷ್ಣ ಪಕ್ಷ ಅಷ್ಟಮಿ ವರೆಗೆ ಈ ಜಾತ್ರಾ ಮಹೋತ್ಸವ ನಡೆಯುವುದಿತ್ತು. ಆದರೆ ಶ್ರೀ ಕ್ಷೇತ್ರದ ಅರ್ಚಕರು ಮತ್ತು ಸಿಬ್ಬಂದಿ ವರ್ಗ ಸಾಂಕೇತಿಕವಾಗಿ ಸರಳವಾಗಿ ಶ್ರೀದೇವಿ ಯ ಉತ್ಸವದ ಪ್ರಕ್ರಿಯೆಗಳನ್ನು ನಡೆಸಿಕೊಂಡು ಹೋಗಲು ನಿರ್ಧರಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಸರಕಾರದ ಕೋವಿಡ್ 19 ನಿಯಮಾವಳಿಗಳ ಪ್ರಕಾರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ದಂಡಾಧಿಕಾರಿಗಳಾದ ಚಿತ್ತಾಪುರ್ ತಹಸಿಲ್ದಾರರು ದಿನಾಂಕ 20 4 2021 ರಂದು ಶ್ರೀಕ್ಷೇತ್ರದಲ್ಲಿ ಸಭೆ ನಡೆಸಿ ಕರೋನವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನದಲ್ಲಿ ಎಂದಿನAತೆ ಕೇವಲ ಪೂಜಾಕೈಂಕರ್ಯ ಮಾತ್ರ ಮುಂದುವರಿಸಿಕೊAಡು ಹೋಗುವಂತೆ ರಥೋತ್ಸವ ಜಾತ್ರೆ ಶ್ರೀ ಕ್ಷೇತ್ರದಲ್ಲಿ ಯಾವುದೇ ರೀತಿಯಿಂದ ಜನಸಂದಣಿ ಯಾಗದಂತೆ ಸರ್ಕಾರಿ ಆದೇಶ ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದ ಕಾರಣ ಶ್ರೀ ಚಂದ್ರಲಾAಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕ ಸಮೂಹ ಸಾಂಕೇತಿಕವಾಗಿ ಕಾರ್ಯಕ್ರಮಗಳನ್ನು ನಡೆಸಲು ನಿರ್ಧರಿಸಿ ಶ್ರೀಕ್ಷೇತ್ರದ ಭಕ್ತಾದಿಗಳಿಗಾಗಿ ಈ ಸಂದೇಶವನ್ನು ರವಾನಿಸಿದ್ದು, ಈ ವರ್ಷವೂ ಸಹ ತಾವುಗಳು ತಮ್ಮ ತಮ್ಮ ಮನೆಯಲ್ಲಿಯೇ ಶ್ರೀ ದೇವಿಯ ಪೂಜಾ ಸೇವಾ ನೈವೇದ್ಯಗಳನ್ನು ಸಮರ್ಥಿಸಿ ಶ್ರೀದೇವಿಯನ್ನು ಪ್ರಾರ್ಥಿಸಲು ಕೋರಲಾಗಿದೆ
ಶ್ರೀಕ್ಷೇತ್ರಕ್ಕೆ ಶ್ರೀ ದೇವಿಯ ದರ್ಶನಕ್ಕೆ ಬರುವಂತಹ ಭಕ್ತಾದಿಗಳೆಲ್ಲರೂ ಸರಕಾರದ ಮುಂದಿನ ಆದೇಶ ಬರುವವರೆಗೆ ಸಹಕರಿಸಲು ಶ್ರೀ ಕ್ಷೇತ್ರ ಶ್ರೀ ಚಂದ್ರಲಾAಬಾದೇವಿ ದೇವಸ್ಥಾನ ಸಮಿತಿ ಭಕ್ತರಲ್ಲಿ ಕೊರಿದೆ.