ಕಲಬುರಗಿ, ಫೆ. 3: ಸರಕಾರದ ಯಾವುದೇ ಸಾಲ, ಸೌಲಭ್ಯವಿಲ್ಲದೇ ಕಳೆದ 9 ವರ್ಷಗಳಿಂದ ನಿರಂತರವಾಗಿ ಸ್ವ ಉದ್ಯೋಗ ಪ್ರಾರಂಭಿಸುವ ಮೂಲಕ ತಾವು ಶ್ರೀ ಸಾಯಿ ಸಮರ್ಥ ಗೃಹ ಉದ್ಯೋಗದಲ್ಲಿ ಬಡ ಹಾಗೂ ಅವಶ್ಯಕತೆಯಿರುವ ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಕÀಲಬುರ್ಗಿ ಜಿಲ್ಲೆಯವರಾದ ಅನ್ನಪೂರ್ಣ ಗಂ.ರಾಚಣ್ಣ ಸಂಗೋಳಗಿ ಅವರನ್ನು ರಟಕಲ್ ಉತ್ಸವದ ಅಂಗವಾಗಿ ಧೀರ ಮಹಿಳೆಗೆ ಮಠದ ಆಶೀರ್ವಾದವಾಗಿ ಪ್ರಶಸ್ತಿಯನ್ನು ಶ್ರೀ ರೇವಣಸಿದ್ದೇಶ್ವರ ಹಿರೇಮಠ ಅವರು ನೀಡಿ ಸನ್ಮಾನಿಸಿದ್ದಾರೆ.
ಪದಾರ್ಥಗಳನ್ನು ಬೇರೆ ಬೇರೆ ಜಿಲ್ಲೆಗಳಿಗೂ ಸಹ ಪೂರೈಕೆ ಮಾಡುತ್ತಿದ್ದಾರೆ.
ಈ ದಿನಮಾನಗಳಲ್ಲಿ ಸರ್ಕಾರದ ಯಾವುದೇ ಅಪೇಕ್ಷೆ ಇಲ್ಲದೆ ಒಬ್ಬ ಮಹಿಳೆ ತನ್ನ ಕಾಲಿನ ಮೇಲೆ ನಿಂತು ಕೊಂಡು ಇತರೆ ಮಹಿಳೆಯಂದಿರಿಗೆ ಮಾದರಿ ಆಗುವಂತೆ ಕೆಲಸ ಮಾಡುತ್ತಿರುವುದು ನನಗೆ ತುಂಬಾ ಸಂತೋಷಕರವಾದ ವಿಷಯ.
ಇಂದು ಅವರ ನಿವಾಸಕ್ಕೆ ಶರಣಗೌಡ ತಂದೆ ತುಳಜಪ್ಪ ಬಿರಾದರ ಮು, ಅಷ್ಟಗ ಅವರು ತೆರಳಿ ವೀಕ್ಷಿಸಿ ಅವರಿಗೆ ಅಭಿನಂದನೆ ಸಲ್ಲಿಸಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ.
ನಿರುದ್ಯೋಗ ಸಮಸ್ಯೆ ಹೊಗಲಾಡಿಸಲು ಇಂತಹ ಮಹಿಳೆಯರ ತರಹ ಎಲ್ಲರೂ ಮುಂದೆ ಬಂದು ಸ್ವ ಉದ್ಯೋಗ ಕೈಗೊಂಡು ಇತರರಿಗೆ ಉದ್ಯೋಗ ನೀಡಿದಾಗ ಮಾತ್ರ ಸ್ವಲ್ಪಮಟ್ಟಿಗಾದರೂ ನಿರುದ್ಯೋಗ ಸಮಸ್ಯೆ ನಿವಾರಣೆಯಾಂದತಾಗುತ್ತದೆ ಎಂದು ಅವರು ಹೇಳಿದಾರೆ.