ಗದ್ದುಗೆ ಮಠದ ಮಹಾಸ್ವಾಮಿಗಳು ಲಿಂಗೈಕ್ಯ

0
3002

ಕಲಬುರಗಿ, ಡಿ. 7: ಕಲಬುರಗಿ – ಹುಬ್ಬಳ್ಳಿ ಗದ್ದುಗೆ ಮಠದ ಹಿರಿಯ ಪೂಜ್ಯಶ್ರೀಗಳಾದ ಮ.ನಿ.ಪ್ರ. ರೇವಣಸಿದ್ದ ಮಹಾಸ್ವಾಮಿಗಳು ಇಂದು ಮಧ್ಯಾಹ್ನ ಲಿಂಗೈಕ್ಯರಾದರೆAದು ತಿಳಿಸಲು ವಿಷಾಧವೇನಿಸುತ್ತದೆ.
ದಿವಂಗತಿಗೆ 75 ವರ್ಷ ವಯಸ್ಸಾಗಿತ್ತು, ಅವರ ಜೀವತ ಕಾಲದಲ್ಲಿ ಮಠದಲ್ಲಿ ಅನೇಕ ವರ್ಷಗಳ ಕಾಲ ಪುರಾಣ, ಪ್ರವಚನಗಳನಲ್ಲದೇ ಹಲವಾರು ದಾರ್ಮಿಕ ಕಾರ್ಯಗಳು ಮಾಡಿದ್ದರು.
ಶ್ರೀಗಳು ಕಳೆದ ಮೂರು ದಿನಗಳಿಂದ ವಯೋಸಹಜ ಕಾಯಿಲೆಯಿಂದ ನಗರದ ವಾತ್ಸಲ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇಂದು ಅವರ ಆರೋಗ್ಯದಲ್ಲಿ ಏರಾಪೇರಾಗಿ ಮಧ್ಯಾಹ್ನ 12.30ಕ್ಕೆ ಲಿಂಗೈಕರಾದರು.
ಕಲಬುರಗಿ ಹಾಗೂ ಹುಬ್ಬಳ್ಳಿಯಲ್ಲಿ ಗದ್ದುಗೆ ಮಠದ ಪರಮಪೂಜ್ಯ ಮಹಾಸ್ವಾಮಿಗಳಾಗಿ ಸಾವಿರಾರು ಭಕ್ತಾದಿಗಳ ಪರಮ ದೈವರಾಗಿದ್ದ ಇವರ ಅಗಲಿಕೆಯಿಂದ ಭಕ್ತ ಸಮುದಾಯ ದುಃಖದ ಮಡುವಿನಲ್ಲಿ ಮುಳುಗಿದೆ.
ಮಕ್ತಂಪುರದ ಗದ್ದುಗೆ ಮಠದಲ್ಲಿ ದಿವಂಗತರ ಅಂತಿಮ ಕ್ರಿಯೆಯು ವೀರಶೈವ ಲಿಂಗಾಯತ ಧರ್ಮದ ವಿಧಿವಿಧಾನದ ಪ್ರಕಾರ ನಾಳೆ ಮಂಗಳವಾರ ಸಂಜೆ 4 ಗಂಟೆಗೆ ಕೃರ್ತು ಗದ್ದುಗೆ ನಡೆಯಲಿದೆ ಎಂದು ಮಠದ ಪಂಚಮAಡಳಿಯ ಶಾಂತಕುಮಾರ ಬಿಲಗುಂದಿ ಹಾಗೂ ರೇಣುಕಾನಂದ ಚೌದರಿ ಅವರು ತಿಳಿಸಿದ್ದಾರೆ.
ಮಹಾಸ್ವಾಮಿಗಳ ನಿಧನಕ್ಕೆ ಸಂತಾಪ:
ಗದ್ದುಗೆ ಮಠದ ಮಹಾಸ್ವಾಮಿಗಳಾದ ಶ್ರೀ ರೇವಣಸಿದ್ದ ಮಹಾಸ್ವಾಮಿಗಳ ನಿಧನಕ್ಕೆ ಮಠದ ಪಂಚ ಕಮಿಟಿಯ ಸದಸ್ಯರಾದ ಶಾಂತಕುಮಾರ ಬಿಲಗುಂದಿ, ರೇಣುಕಾನಂದ ಚೌಧರಿ, ಅಣವೀರಪ್ಪ ಕಾಳಗಿ, ಚಂದ್ರಕಾAತ ಕಾಳಗಿ ಅಲ್ಲದೇ ಮಠದ ಭಕ್ತರಾದ ಬಸವರಾಜ ನಾಶಿ ಮತ್ತು ಶರಣು ಪಪ್ಪಾ ಅವರುಗಳು ತೀವ್ರ ಸಂತಾಪ ವ್ಯಕ್ತಪಡಿಸಿ, ಅವರ ಆತ್ಮಕೆ ಶಾಂತಿಯನ್ನು ನೀಡಲು ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

LEAVE A REPLY

Please enter your comment!
Please enter your name here