ಬೀದರ ಹೊರತುಪಡಿಸಿ ಎಲ್ಲಡೆ ಮತಪತ್ರಗಳ ಬಳಕಗೆ ಅಯೋಗ ಆದೇಶ

0
918

ಕಲಬುರಗಿ, ನ. 30: ಈ ತಿಂಗಳು 22 ಮತ್ತು 27ರಂದು ನಡೆಯಲಿರುವ ಎರಡು ಹಂತದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಬೀದರ ಜಿಲ್ಲೆ ಹೊರತು ಪಡಿಸಿ ಉಳಿದ ಎಲ್ಲ ಜಿಲ್ಲೆಗಳಲ್ಲಿ ಮತಪತ್ರಗಳನ್ನು ಬಳಸಲಾಗುತ್ತಿದೆ.
ಈ ಬಗ್ಗೆ ರಾಜ್ಯ ಚುನಾವಣಾ ಆಯೋಗ ಅಧಿಕೃ ತ ಆದೇಶ ಹೊರಡಿಸಿದ್ದು, ಇಂದಿನಿAದಲ್ಲೇ ನೀತಿಸಂಹಿತೆ ಜಾರಿಗೆ ಬಂದಿದ್ದು, ಈ ತಿಂಗಳು 7ರಂದು ಆರಂಭವಾಗಲಿರುವ ಚುನಾವನಾ ಪ್ರಕಿಯು 31.12.2020ಕ್ಕೆ ಪೂರ್ಣಗೊಳ್ಳಲಿದೆ.
ಮೊದಲನೇ ಹಂತವಾಗಿ 22.12.2020ರಂದು ಹಾಗೂ ಎರಡು ಹಂತವಾಗಿ 27.12.2020ರಂದು ಕ್ರಮವಾಗಿ ಚುನಾವಣೆಗಾಗಿ ಮತದಾನ ನಡೆಯಲಿದೆ.
ಈ ಬಾರಿಯ ಚುನಾವಣೆ ಕರೊನಾ ಕರಿಚಾಯೆ ನಡುವೆ ನಡೆಯಲಿದ್ದು, ಕೊರೊನಾ ಸೋಂಕಿತರಿಗೂ ಮತದಾನಕ್ಕೆ ಆಯೋಗ ವ್ಯವಸ್ಥೆ ಮಾಡಿದೆ.
ಮತದಾನ ಕೇಂದ್ರದಲ್ಲಿ ಆರೋಗ್ಯ ಸಹಾಯಕರ ಸೇವೆ ಬಳಸಿಕೊಳ್ಳಲಾಗುತ್ತಿದ್ದು, ಅಲ್ಲದೇ ಮತದಾನ ಕೇಂದ್ರಗಳಲ್ಲಿ ಹ್ಯಾಂಡ್ ಸ್ಯಾನಿಟೈಸರ್ ವ್ಯವಸ್ಥೆ ಕೂಡಾ ಮಾಡಲಾಗಿದೆ.
ಪ್ರತಿಯೊಂದು ಮತಗಟ್ಟೆಯಲ್ಲಿ 1500 ರಿಂದ 1000 ಮತದಾರರ ಮತದಾನಕ್ಕೆ ಸಂಖ್ಯೆ ಇಳಿಸಲಾಗಿದ್ದು, ಕಡ್ಡಾಯವಾಗಿ ಸಾಮಾಜಿಕ ಅಂತರ ಹಾಗೂ ಮುಖಕ್ಕೆ ಮಾಸ್ಕ ಬಳಕೆಗೆ ಆಯೋಗ ಆದೇಶ ಹೊರಡಿಸಿದೆ.
ಗ್ರಾಮ ಪಂಚಾಯಿತಿ ಚುನಾವಣೆ ನಡೆಸಲು ದಿನಾಂಕಗಳನ್ನು ಘೋಷಿಸಲು ಎಸ್‌ಇಸಿಗೆ ಕರ್ನಾಟಕ ಹೈಕೋರ್ಟ್ ಮೂರು ವಾರಗಳ ಕಾಲಾವಕಾಶ ನೀಡುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಕಟಣೆ ಬಂದಿದೆ.
ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಮೊದಲ ಹಂತ ಮತ್ತು ಎರಡನೇ ಹಂತದ ಮತದಾನವನ್ನು ಕ್ರಮವಾಗಿ ಡಿಸೆಂಬರ್ 7 ಮತ್ತು ಡಿಸೆಂಬರ್ 11 ರಂದು ನಡೆಸುವ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

LEAVE A REPLY

Please enter your comment!
Please enter your name here