ರಾಜ್ಯೋತ್ಸವ ಮಾಸದಲ್ಲಿ ಗ್ರಂಥಾಲಯ ಬಂದ್

0
818

ಕಲಬುರಗಿ, ನ. 21: ಕಳೆದ ಜನೆವರಿಯಂದು ನಗರದ ಕನ್ನಡ ಭವನದಲ್ಲಿ ಇದ್ದ ಸಾರ್ವ ಜನಿಕ ಗ್ರಂಥಾಲಯವನ್ನು ಮುಚ್ಚಲಾಗಿದ್ದು, ಕನ್ನಡ ಪತ್ರಿಕೆ ಓದುಗರಿಗೆ ಇದರಿಂದ ತುಂಬಾ ಬೇಸರವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ನಡೆಯುತ್ತಿದ್ದ ಗ್ರಂಥಾಲಯ ಕಳೆದ 11 ತಿಂ ಗಳಿಂದ ಮುಚ್ಚಲಾಗಿದೆ.
ಇದಕ್ಕೆ ಪಯಾರ್ಯವಾಗಿ ಬೇರೆ ಕಡೆ ಗ್ರಂಥಾಲಯ ತೆರೆಯುವ ಬಗ್ಗೆ ಜಿಲ್ಲಾ ಗ್ರಂಥಾಲಯ ಅಧಿಕಾರಿಗಳನ್ನು ಕೇಳಿದರೆ ಹಾ ರಿಕೆ ಉತ್ತರ ಬರುತ್ತಿದ್ದು, ಈಗ ಎಲ್ಲರೂ ಆನ್‌ಲೈನ್‌ನಲ್ಲೇ ಪತ್ರಿಕೆಗಳನ್ನು ಓದುತ್ತಿದ್ದಾರೆ ಗ್ರಂಥಾಲಯಕ್ಕೆ ಬಂದು ಓದುಗರ ಸಂಖ್ಯೆ ತುಂಬಾ ವಿರಳವಾಗಿದೆ ಎಂಬುದಾಗಿ ಹೇಳಿಕೆ ನೀಡುತ್ತಿದ್ದಾರೆ.
ನವೆಂಬರ್ ಕರ್ನಾಟಕ ರಾಜ್ಯೋತ್ಸವ ವರ್ಷಾಚರಣೆ ತಿಂಗಳು, ಈ ತಿಂಗಳಲ್ಲಿಯೇ ಗ್ರಂಥಾಲಯಗಳು ಮುಚ್ಚುವುದು ಎಷ್ಟು ಸಮ ಂಜಸ. ಈ ನಿಟ್ಟಿನಲ್ಲಿ ಕನ್ನಡ ಪರ ಸಂಘಟ ನೆಗಳು ಏನು ಮಾಡುತ್ತಿವೆ?
ಕನ್ನಡಕ್ಕಾಗಿ ನಿರಂತರ ಹೋರಾಟ ಮಾಡುವ ಸಂಘಟನೆಗಳು ಪಯಾರ್ಯ ಗ್ರಂಥಾಲಯ ಸ್ಥಾಪಿಸಲು ಹೋರಾಟ ನಡೆ ಸುವರೇ ಕಾದುನೋಡಬೇಕಾಗಿದೆ?

LEAVE A REPLY

Please enter your comment!
Please enter your name here