ಚೌಕ್ ಪೋಲಿಸರಿಂದ ಕುಖ್ಯಾತ ಮನೆಗಳ್ಳನ ಬಂಧನ 8.30 ಲಕ್ಷ ರೂ.ಗಳ ಮೌಲ್ಯದ ಚಿನ್ನಾಭರಣ ಜಪ್ತಿ

0
590

ಕಲಬುರಗಿ.ನ.19:ಕುಖ್ಯಾತ ಮನೆಗಳ್ಳನಿಗೆ ಪೋಲಿಸರು ಬಂಧಿಸಿ, ಆತನಿಂದ ಒಟ್ಟು ಮೂರು ಪ್ರಕರಣಗಳಲ್ಲಿ 8.30 ಲಕ್ಷ ರೂ.ಗಳ ಮೌಲ್ಯದ 166 ಗ್ರಾಮ್ ತೂಕದ ಚಿನ್ನಾಭರಣ ಜಪ್ತಿ ಮಾಡಿಕೊಂಡ ಘಟನೆ ನಗರದ ಹುಮ್ನಾಬಾದ್ ವರ್ತುಲ ರಸ್ತೆಯಲ್ಲಿ ವರದಿಯಾಗಿದೆ.
ಬಂಧಿತನಿಗೆ ನಗರದ ಸೇಡಂ ರಸ್ತೆಯಲ್ಲಿನ ಬಾಪುನಗರದ ನಿವಾಸಿ ಹಾಗೂ ವೇಟರ್ ಕೆಲಸಗಾರ ಸುಮನ್ ತಂದೆ ಭಾರತ್ ಉಪಾಧ್ಯ ಎಂದು ಗುರುತಿಸಲಾಗಿದೆ. ಬಂಧಿತನ ವಿರುದ್ಧ ಚೌಕ್, ಬ್ರಹ್ಮಪೂರ್ ಹಾಗೂ ಸ್ಟೇಷನ್ ಬಜಾರ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ತಲಾ ಒಂದೊAದು ಮನೆಗಳ್ಳತನ ಪ್ರಕರಣಗಳಲ್ಲಿನ ಚಿನ್ನಾಭರಣಗಳನ್ನು ಪೋಲಿಸರು ಜಪ್ತಿ ಮಾಡಿಕೊಂಡು, ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಚೌಕ್ ಪೋಲಿಸ್ ಠಾಣೆಯ ಪಿಐ ಎಸ್.ಆರ್. ನಾಯ್ಕ್ ಅವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಬಂದೇನವಾಜ್, ಭೀಮಾ ನಾಯಕ್, ರಮೇಶ್, ಪ್ರಭಾಕರ್ ಅವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ಪೋಲಿಸ್ ಆಯುಕ್ತರಾದ ಎನ್. ಸತೀಶಕುಮಾರ ಅವರು ತಿಳಿಸಿದ್ದಾರೆ.

Total Page Visits: 778 - Today Page Visits: 1

LEAVE A REPLY

Please enter your comment!
Please enter your name here