ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ವಿಶೇಷ ಆದ್ಯತೆಗೆ ಹೈ.ಕ.ಜನಪರ ಸಮಿತಿ ಆಗ್ರಹ

0
1222

ಕಲಬುರಗಿ, ನ. ೨:ಸರ್ಕಾರ ಪ್ರತ್ಯೇಕತೆಯ ಕೂಗನ್ನು ಗಂಭೀರವಾಗಿ ಪರಿಗಣಿಸಿ ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಫರ್ಷ ಸಮಿತಿ ಸರ್ಕಾರಕ್ಕೆ ಒತ್ತಾಯಿಸಿದೆ.
ಈ ಕುರಿತು ಪತ್ರಿಕಾ ಹೇಳಿಕಯನ್ನು ಬಿಡು ಗಡೆ ಮಾಡಿರುವ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷö್ಮಣ ದಸ್ತಿ ಅವರು, ಸರ್ಕಾರದ ಮಲತಾಯಿ ಧೋರಣೆ ಮತ್ತು ನಿರಂತರ ನಿರ್ಲಕ್ಷದ ಕಾರಣ ಈ ಹಿಂದೆ ೧೯೮೭ ರಿಂದ ಹೈದ್ರಾಬಾದ ಕರ್ನಾಟಕ ಪ್ರದೇಶ ಪ್ರತ್ಯೇಕ ರಾಜ್ಯ ಬೇಕು ಇಲ್ಲವೆ ಅಭಿವೃದ್ಧಿ ಮಾಡಿರಿ ಎಂಬ ಕೂಗು ಆರಂಭವಾಯಿತು ಎಂದಿದ್ದಾರೆ.
ಈ ಪ್ರತ್ಯೇಕತೆಯ ಕೂಗಿಗೆ ಆಗ ಆಡಳಿ ತದಲ್ಲಿ ಇದ್ದ ಸರಕಾರಗಳು ಗಂಭೀರವಾಗಿ ಪರಿಗಣಿಸಿ ೧೯೯೦ರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಸ್ಥಾಪನೆ, ನಂಜುA ಡಪ್ಪ ವರದಿ ಅನುಷ್ಠಾನಕ್ಕೆ ಪೂರಕವಾಗಿ ವಿಶೇಷ ಅನುದಾನದಂಥ ನಮ್ಮ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಲು ಆರಂಭಿಸಿತು. ಅz Àರಂತೆ ನಮ್ಮ ಬಹು ದಿನಗಳ ಬೇಡಿಕೆಯಾಗಿದ್ದ ೩೭೧ನೇ ಕಲಂ ತಿದ್ದುಪಡಿಯ ಸಂವಿಧಾನಬದ್ದ ವಿಶೇಷ ಸ್ಥಾನಮಾನದ ಬೇಡಿಕೆಗೆ ಎಲ್ಲಾ ರಾಜಕೀಯ ಪಕ್ಷಗಳ ಇಚ್ಛಾಶಕ್ತಿಯಿಂದ ಸಂವಿಧಾನದಲ್ಲಿ ತಿದ್ದುಪಡಿಯಾಗಿ ಜಾರಿಗೆ ಬಂದರೂ ಸಹ ಇದರ ಪರಿಣಾಮಕಾರಿ ಅನುಷ್ಠಾನ ಆಗದೆ ಇರವದು ಈ ಪ್ರದೇಶದ ಜನಮಾನಸಕ್ಕೆ ನಿರಾಸೆಯಾಗಿದೆ. ವೃತ್ತಿಪರ ಸೀಟು ಬಿಟ್ಟರೆ ಬೇರೆ ಹೇಳಿಕೊಳ್ಳುವಂಥ ಯಾವ ಫಲ ನಮಗೆ ಸಿಗುತ್ತಿಲ್ಲ ಎಂದು ಅವರು ಖೇದ ವ್ಯಕ್ತಪಡಿಸಿ ದ್ದಾರೆ.
೨೦೧೯ರಲ್ಲಿ ಯಡಿಯೂರಪ್ಪನವರು ಮತ್ತೆ ಮುಖ್ಯಮಂತ್ರಿಗಳಾಗದ ನಂತರ ನಮ್ಮ ಪ್ರದೇ ಶಕ್ಕೆ ಕಲ್ಯಾಣ ಕರ್ನಾಟಕ ನಾಮಕರಣ ಮಾಡಿ ೩೭೧ನೇ ಕಲಂ ತಿದ್ದುಪಡಿಯ ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರತ್ಯೇಕ ಮಂತ್ರಾಲಯ ಸ್ಥಾಪನೆ ಮಾಡುವ ಬಗ್ಗೆ ಕಳೆದ ವರ್ಷ ಅಧಿಕೃತವಾಗಿ ಘೋಷಣೆ ಮಾಡಿದರು, ಇದರಿಂದ ನಾವು ಬಹಳ ಖುಷಿ ಪಟ್ಟಿದ್ದೇವು ಆದರೆ ಈ ಘೋಷಣೆ ಕೇವಲ ಭರವಸೆಯಾಗಿ ಉಳಿಯಿತು. ಒಂದು ಕಡೆ ಮಂತ್ರಿ ಮಂಡಳದಲ್ಲಿ ಸಿಗಬೇಕಾದ ಪ್ರಾತಿನಿದಿತ್ವ ಸಿಕ್ಕಿಲ್ಲ, ಮತ್ತೊಂದೆಡೆ ಮುಖ್ಯಮಂತ್ರಿಗ ಳು ಘೋಷಣೆ ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳು ಅನುಷ್ಠಾನಕ್ಕೆ ಬರುತ್ತಿಲ್ಲ ಇಂತಹ ನಿರ್ಲಕ್ಷದ ಸಂದರ್ಭಗಳು ನಿರ್ಮಾಣವಾದರರೆ ಪ್ರತ್ಯೇಕತೆ ಕೂಗು ಸಹಜವಾಗಿಯೇ ಏಳುತ್ತದೆ ಎಂದಿದ್ದಾರೆ.
ಸರ್ಕಾರ ಇದಕ್ಕೆ ಅವಕಾಶ ನೀಡದೆ, ಕಲ್ಯಾಣ ಕರ್ನಾಟಕದ ರಚನಾತ್ಮಕ ಪ್ರಗತಿಗೆ ವಿಶೇಷ ಸ್ಥಾನಮಾನಕ್ಕೆ ತಕ್ಕಂತೆ ವಿಶೇಷ ಆದ್ಯತೆ ನೀಡಲು ಸಮಿತಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಸರ್ಕಾರಕ್ಕೆ ಒತ್ತಾಯಿ ಸುತ್ತದೆ ಅದರಂತೆ ಕಲ್ಯಾಣ ಕರ್ನಾಟಕ ಪ್ರದೇಶದ ಎಲ್ಲಾ ಪಕ್ಷಗಳ ನಾಯಕರು ಈ ಬಗ್ಗೆ ಸಂಘಟಿತ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಲು ಅವರು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here