ಶ್ರೀಕ್ಷೇತ್ರ ಘಾಣಗಾಪುರದಲ್ಲಿ ದತ್ತನ ಹುಂಡಿಯ ಕಾಣಿಕೆ ಈ ವರ್ಷ 42 ಲಕ್ಷ ರೂ.

0
1338

(ವರದಿ: ಈರಣ್ಣ ವಗ್ಗೆ ಅಫಜಲಪುರ)
ಅಫಜಲಪೂರ, ಅ. 10: ದಕ್ಚಿಣ ಭಾರತದಲ್ಲಿಯೇ ಪ್ರಸಿದ್ದ ಯಾತ್ರಾ ಸ್ಥಳವಾದ
ಕಲಬುರಗಿ ಜಿಲ್ಲೆ ಅಫಜಲಪುರ ತಾಲೂಕಿನ ಸುಕ್ಷೇತ್ರ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಭಕ್ತರು ದತ್ತನ ದರ್ಶ£ದೊಂದಿಗೆ ಪುನಿತರಾಗುವುದರ ಜೊತೆಗೆ ತನು ಮನದಿಂದ ಭಾವ ಭಕ್ತಿಯಿಂದ ಹುಂಡಿ ಪೆಟ್ಟಗೆಯಲ್ಲಿ ಕಾಣಿಕ, ಬೆಳ್ಳಿ, ಬಂಗಾರ,ಇನ್ನಿತರ ವಡವೆಗಳನ್ನು ಹಾಕಿ ಪೂಜೆ ಪುನಸ್ಕಾರ್ ಗಳನ್ನು ಮಾಡಿ ತಮ್ಮ ಇಷ್ಟಾರ್ಥಗಳನ್ನು ಈಡೇರಿಕೊಳ್ಳುತ್ತಾರೆ.
ಪ್ರತಿ ವರ್ಷದಲ್ಲಿ ಮೂರುಬಾರಿ ದೇವಸ್ಥಾನದಲ್ಲಿರುವ ಹುಂಡಿ ಪೆಟ್ಟಿಗೆಗಳನ್ನು ಒಡೆಯುತ್ತಾರೆ. ಈ ಎಣಿಕೆ ಕಾರ್ಯದಲ್ಲಿ ದೇವಸ್ಥಾನದ ಹಾಗೂ ಕಂದಾಯ ಇಲಾಖೆ, ಬ್ಯಾಂಕ್ ಸಿಬ್ಬಂದಿಗಳು ಬೆಳಗ್ಗೆಯಿಂದ ಸಂಜೆವರೆಗೂ ಎಣಿಕೆಯ ಕಾರ್ಯದಲ್ಲಿ ತೊಡಗಿದರು.
ಲಾಕ್ ಡೌನ್ ನಿಂದ ದೇವಸ್ಥಾನ ಮುಚ್ಚಿದ್ದರಿಂದ ಇಲ್ಲಿಯವರೆಗೆ ಭಕ್ತರು ಹಾಕಿರುವ ಕಾಣಿಕೆ ಎಣಿಸುವದು ಸಾಧ್ಯವಾಗದ ಕಾರಣ ಈಗ ದೇವಸ್ಥಾನದ ದರ್ಶನ ಆರಂಭವಾಗಿರುವುದರಿAದ ಭಕ್ತರು ಹಾಕಿರುವ ಕಾಣಿಕೆಯನ್ನು ಎಣಿಕೆ ಮಾಡಲಾಯಿತು.
ಒಟ್ಟು ದತ್ತ ದೇವಸ್ಥಾನ ಮತ್ತು ಸಂಗಮ್ ದೇವಸ್ಥಾನ ಸೇರಿ 8 ಹುಂಡಿ ಪೇಟಿಗಳನ್ನು ಒಡೆದು ಎಣಿಕೆ ಮಾಡಿದಾಗ 42ಲಕ್ಷ 27 ಸಾವಿರ 520 ರೂಪಾಯಿಗಳಾಗಿವೆ.
ಜೊತೆಗೆ ಬಂಗಾರ,ಬೆಳ್ಳಿಯ ವಡವೆ ವಸ್ತ್ರಗಳನ್ನು ಕೂಡ ಭಕ್ತರು ಕಾಣಿಕೆಯಾಗಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ್ ಬಸವಲಿಂಗಪ್ಪ ನೈಕೋಡಿ,ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ, ಬ್ಯಾಂಕ್ ವ್ಯೆವಸ್ಥಾಪಕರು, ಕಂದಾಯ ಇಲಾಖೆ ಈರಯ್ಯ ಸ್ವಾಮಿ,ಶಿವುಕಾಂತಮ್ಮ,ಮಹೇಶ,ಸAಜೀವಕುಮಾರ,ದತ್ತು ನಿಂಬರ್ಗಿ, ಸತೀಶ, ಮಡಿವಾಳ, ಧನರಾಜ,ಪೋಲಿಸ ಇಲಾಖೆಯವರು ಇದ್ದರು.

LEAVE A REPLY

Please enter your comment!
Please enter your name here