(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ಅ. 10: ಬೆಳ್ಳಂಬೆಳಿಗ್ಗೆ ನಗರದ ಎಂ.ಜಿ. ರಸ್ತೆಯ ಫುಡ್‌ಝೋನ್ ಹತ್ತಿರದ ಆರ್.ಟಿಓ. ಹೋಗುವ ರಸ್ತೆಯಲ್ಲಿ ಓರ್ವ ಯುವಕನ ಬರ್ಬರ ಹತ್ಯೆಮಾಡಲಾಗಿದೆ.
ಕೊಲೆಯಾದ ಯುವಕನ ಬಗ್ಗೆ ಪತ್ತೆ ಹಚ್ಚಿದ ಪೋಲಿಸರು ನಗರದ ನಯಾ ಮೋಹಲ್ಲಾದ ನಿವಾಸಿ ಗುಲಾಮ್ ದಸ್ತಗೀರ್ ತಂದೆ ಅಜ್ಜದ ಅಲಿ ವಯಸ್ಸು 19 ವರ್ಷ ಎಂದು ಹೇಳಲಾಗಿದೆ
ಬೆಳಿಗ್ಗೆ 5.30ಕ್ಕೆ ಕಟ್ಟಡವೊಂದರ ಮುಂದೆ ಶವ ಬಿದ್ದಿರುವುದನ್ನು ನೋಡಿದ ವಾಚ್ ಮನ್ ಪೋಲಿಸರಿಗೆ ದೂರವಾಣಿ ಮಾಡಿ ವಿಷಯ ತಿಳಿಯುತ್ತಲೇ, ಸ್ಥಳಕ್ಕೆ ಧಾವಿಸಿದ ಪೋಲಿಸರು ಕೊಲೆಯಾದ ಯುವಕನನ್ನು ಪರಿಶೀಲಿಸಿದಾಗ ಆತನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ, ಹತ್ಯೆಗೈದು ಬೇರೆಯೆಡೆಯಿಂದ ಶವವನ್ನು ಇಲ್ಲಿ ಬಿಸಾಡಿ ಹೋಗಿರಬಹುದು ಎಂದು ಶಂಕಿಸಲಾಗಿದ್ದು, ಈ ಹತ್ಯೆ ನಡೆದಿದ್ದು ನಿನ್ನೆ ಸುಮಾರು 10 ರಿಂದ 11 ಗಂಟೆ ರಾತ್ರಿ ನಡೆದಿದೆ ಎಂದು ಹೇಳಲಾಗುತ್ತಿದೆ.
ಕೊಲೆಯ ಬಗ್ಗೆ ಸುದ್ದಿ ತಿಳಿಯುತ್ತಲೇ ಫೊಡ್‌ಝೋನ್ ಬಳಿ ಜನಜಂಗುಳಿ ಸೇರಿತು.
ಯುವಕನ ಪತ್ತೆಗಾಗಿ ಪೋಲಿಸರು ಹೆಣಗಾಡುತ್ತಿದ್ದು, ಈ ಘಟನೆ ಎಂ.ಬಿ. ನಗರ ಠಾಣೆ ವ್ಯಾಪ್ತಿಗೆ ಬರಲಿದ್ದು, ಮುಂದಿನ ತನಿಖೆಯನ್ನು ಪೋಲಿಸರು ಕೈಗೊಂಡಿದ್ದಾರೆ.