ಹಿರಿಯ ಕಾಂಗ್ರೆಸ್ ಧುರೀಣ ಗುಂಡಪ್ಪ ಹಾಗರಗಿ ನಿಧನ

0
916

ಕಲಬುರಗಿ, ಅ. 2: ಹಿರಿಯ ಕಾಂಗ್ರೆಸ್ ಧುರೀಣ ಹಾಗೂ ಮಾಜಿ ಎ.ಪಿ.ಎಂ.ಸಿ. ಅಧ್ಯಕ್ಷ ಗುಂಡಪ್ಪ ಹಾಗರಗಿ ಅವರು ಇಂದು ನಸುಕಿನ ಜಾವ ನಿಧನ ಹೊಂದಿದ್ದಾರೆ.
ದಿವAಗತರಿಗೆ 70 ವರ್ಷ ವಯಸ್ಸಾಗಿತ್ತು. ಸುಮಾರು 30 ವರ್ಷಗಳಿಂದ ರಾಜಕೀಯದಲ್ಲಿ ತಮ್ಮದೇ ಛಾಪುಮೂಡಿಸಿದ್ದು, ಒಂದು ಬಾರಿಗೆ ಕಲಬುರಗಿ ಎಪಿ ಎಂಸಿಗೆ ಅಧ್ಯಕ್ಷರಾಗಿಯೂ ಕೂಡಾ ಸೇವೆ ಸಲ್ಲಿಸಿದ್ದರು.
ಮೂರು ಜನ ಪುತ್ರರು, ಮೂರು ಜನ ಹೆಣ್ಣು ಮಕ್ಕಳನ್ನು ಹಾಗೂ ಪತ್ನಿ ಸೇರಿ ದಂತೆ ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೆಯು ಇಂದು ಶುಕ್ರವಾರ ಸಂಜೆ 4.00 ಗಂಟೆಗೆ ಕಲ್ಲಹಂಗರಾ ರಸ್ತೆಯ ಕುಮಸಿ ವಾಡಿಯ ಅವರ ಸ್ವಂತ ತೋಟದಲ್ಲಿ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here