ಪವರ ಟಿವಿ ಲೈವ್ ಬಂದ್ ತೆರವಿಗೆ ಅಫಜಲಪುರ ಪತ್ರಕರ್ತರ ಸಂಘ ಆಗ್ರಹ

0
843

ಅಫಜಲಪುರ, ಅ. 1: ಪವರ್ ಟಿವಿ ಕನ್ನಡ ವಾಹಿನಿ ಲೈವ್‌ನ್ನು ಮಾಡಿರುವುದನ್ನು ಕೂಡಲೇ ತೆರವುಗೊಳಿಸಲು ಆಗ್ರಹಿಸಿ ಅಫಜಲಪೂರ ಕಾರ್ಯ ನಿರತ ಪತ್ರಕರ್ತರ ಸಂಘವು ಆಗ್ರಹಸಿದೆ.
ಸಂಘದ ಅಫಜಲಪೂರ ತಾಲೂಕ ಅಧ್ಯಕ್ಷರಾದ ವಗ್ಗೆ ಅವರ ನೇತ್ರತ್ವದಲ್ಲಿ ಇಂದು ತಹಸೀಲ್ದಾರರ ಮುಖಾಂತರ ರಾಜ್ಯಪಾಲರಿಗೆ ಕೂಡಲೇ ಈ ವಾಹಿನಿ ಲೈವ್ ತೆರವುಗೊಳಿಸಲು ಆಗ್ರಹಿಸಿ ಮನವಿ ಪvತ್ರ ಸಲ್ಲಿಸಿದರು.
ವಾಹಿನಿ ಮಾಲೀಕರ ಮೇಲೆ ಮಾಡಿರುವ ಆರೋಪ ಏನೆ ಇರಲಿ. ಆ ವಿಚಾರದ ಬಗ್ಗೆ ತನಿಖೆ ನಡೆಸುವುದಕ್ಕೆ ಅಭ್ಯಂತರವಿಲ್ಲ, ಆದರ ಒಂದು ಟಿವಿ ವಾಹಿನಿಯ ಲೈವ್ ಬಂದ್ ಮಾಡಿರುವುದರಿಂದ ಅದನ್ನೆ ಅವಲಂಬಿಸಿ ವೃತ್ತಿ ಮಾಡುತ್ತಿರುವ ನೂರಾರು ಪತ್ರಕರ್ತ ಕುಟುಂಬಗಳು ಬೀದಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಕೂಡಲೇ ಈ ವಾಹಿನಿ ಲೈವ್ ಪ್ರಾರಂಭಕ್ಕೆ ಗೃಹ ಸಚಿವರಿಗೆ ನಿರ್ದೇಶನ ನೀಡಿ, ನ್ಯಾಯದೊರಕಿಸಿ ಕೊಡಬೇ ಕೇಂದು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಪತ್ರಕರ್ತರಾದ ಮಲ್ಲಿಕಾ ರ್ಜುನ ಹಿರೇಮಠ, ಎ.ಬಿ. ಪಟೇಲ್ ಸೊನ್ನ, ಅಶೋಕ ಕಲ್ಲೂರ, ರಾಹುಲ್ ದೊಡ್ಡಮನಿ, ಸಿದ್ದು ಶಿವಹರಿ, ಅರುಣ ಹೂಗಾರ ಅವರುಗಳು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here