ನನ್ನ ಸಮುದಾದ ಜತೆಗೆ ತಳವಾರ, ಪರಿವಾರದವರಿಗೂ ನ್ಯಾಯ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ : ಬಾಬುರಾವ ಚಿಂಚನಸೂರ

0
882

ಕಲಬುರಗಿ, ಆಗಸ್ಟ. ೩೦: ನನ್ನ ಸಮುದಾಯದ ಜೊತೆ-ಜೊತೆಗೆ ತಳವಾರ ಪರಿವಾರ ಸಮುದಾಯಕ್ಕೆ ನ್ಯಾಯ ಕೊಡಿಸುವ ಜವಾಬ್ದಾರಿ ನನ್ನ ಮೇಲಿದೆ ನಾನು ಕೂಡಲೇ ಈ ಎರಡು ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣ ಪತ್ರ ನೀಡುವಂತೆ ಮುಖ್ಯಮಂತ್ರಿಗಳ ಜತೆ ಮಾತನಾಡತ್ತೇನೆ ಎಂದು ಮಾಜಿ ಸಚಿವರು ಹಾಗೂ ಅಂಬಿಗರ ಚೌಡಯ್ಯ ಅಭಿವೃಧಿ ನಿಗಮದ ಅಧ್ಯಕ್ಷರಾದ ಬಾಬುರಾವ್ ಚಿಂಚನಸುರ ಅವರು, ಹೇಳಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರುಗಡೆ ಇಂದು ರವಿವಾರ ತಳವಾರ್ ಪರಿವಾರ ಎಸ್.ಟಿ ಹೋರಾಟ ಸಮಿತಿ ಹಮ್ಮಿಕೊಂಡಿರುವ ಮೂರನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ೮೮ ಹೆಚ್‌ನಲ್ಲಿ ಬರುವ ತಳವಾರ, ತಳವಾರ ಬೊಯಾ ಸಮುದಾಯವನ್ನು ಯಥಾವತ್ತಾಗಿ ಕೇಂದ್ರ ಸರ್ಕಾರ ಅನುಮೋದಿಸಿ ರಾಷ್ಟ್ರಪತಿಯವರಿಂದ ಅಂಗಿಕರಿಸಿ ರಾಜ್ಯ ಸರ್ಕಾರಕ್ಕೆ ಕಳುಹಿಸಿಕೊಟ್ಟಿದೆ. ರಾಜ್ಯ ಸರಕಾರವು ಕೂಡ ಜೂನ್ ೫ ೨೦೨೦ ರಂದು ರಾಜ್ಯಪತ್ರ ಹೊರಡಿಸಿ ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಿದೆ.
ಆದರೆ ಕೆಲವರ ರಾಜಕೀಯ ದುರುದ್ದೇಶದಿಂದ ಹೀಗಾಗಿರುವುದು ಮೇಲ್ನೋಟದಲ್ಲಿ ಕಂಡುಬರುತ್ತಿದೆ ಈ ವಿಷಯ ಕುರಿತು ಸಮಾಜ ಕಲ್ಯಾಣದ ಸಚಿವರೊಂದಿಗೆ ಈಗಾಗಲೆ ಮಾತನಾಡಿದ್ದೇನೆ ಈ ಸಮಸ್ಯೆ ಕುರಿತು ಮುಖ್ಯಮಂತ್ರಿಗಳ ಗಮನಕ್ಕೂ ತಂದು ತಳವಾರ ಪರಿವಾರ ಸಮುದಾಯದವರಿಗೆ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಹಾಗೆ ಸತ್ಯಾಗ್ರಹಕ್ಕೆ ಬೆಂಬಲಿಸಿ ಭೇಟಿ ನೀಡಿದ ಅಲ್ಲಮಪ್ರಭು ಸಂಸ್ಥಾನ ಪೀಠ ತೊನಸನಹಳ್ಳಿ ಮಲ್ಲಣ್ಣಪ್ಪ ಮುತ್ಯಾ÷್ತ ಅವರು ಮಾತನಾಡಿ ತಳವಾರ, ಪರಿವಾರ ಸಮುದಾಯಕ್ಕೆ ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಅನ್ಯಾಯವಾಗುತ್ತಿತ್ತು ಆದ್ದರಿಂದ ಕೇಂದ್ರ ಸರಕಾರ ಸಾಮಾಜಿಕ ನ್ಯಾಯದ ಹಿತದೃಷ್ಟಿಯಿಂದ ಈ ಸಮುದಾಯಗಳಿಗೆ ಪರಿಶಿಷ್ಟ ಪಂಗಡಕ್ಕೆ ಸೇರಿಸಿ ರಾಜ್ಯಪತ್ರ ಹೊರಡಿಸಿದೆ. ಆದರೆ ಕರ್ನಾಟಕ ಸರಕಾರವು ಈ ಸಮುದಾಯಗಳಿಗೆ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಪಂಗಡದಿAದ ಕೈಬಿಟ್ಟು ಈ ಸಮುದಾಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದರು.
ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನಮ್ಮ ಸಮುದಾಯಗಳಿಗೆ ನ್ಯಾಯುತವಾಗಿ ಪರಿಶಿಷ್ಟ ಪಂಗಡ ಪ್ರಮಾಣಪತ್ರ ನೀಡಬೇಕು. ಒಂದು ವೇಳೆ ಇಲ್ಲದಿದ್ದರೆ ಮುಂದಿನ ಪರಿಣಾಮ ರಾಜ್ಯ ಸರಕಾರ ಎದುರಿಸಬೇಕಾಗುತ್ತದೆ ಅಲ್ಲದೇ ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಡಾ.ಸರ್ದಾರ ರಾಯಪ್ಪ , ರಾಜೇಂದ್ರ ರಾಜವಾಳ, ದೇವೇಂದ್ರ ಚಿಗರಳ್ಳಿ , ಚಂದ್ರಶೇಖರ ಜಮಾದಾರ ವಕೀಲರು , ಶಾಂತಪ್ಪ ಕೂಡಿ, ಶಿವು ಸುಣಗಾರ, ಸೈಬಣ್ಣ ಜಾಲಗಾರ, ದಿಗಂಬರ ಕಾಡಪ್ಪಗೋಳ, ಶರಣು ಕೋಲಿ, ದಿಗಂಬರ ಡಾಂಗೆ, ಚಂದ್ರಕಾAತ್ ಗಂವ್ಹಾರ, ಅನಿಲ ಕಾಮಣ್ಣ ವಚ್ಚಾ, ಮಡಿವಾಳ ಹಣಮಂತಗೋಳ, ಕರಣ ಬಿರೆದಾರ, ಚಂದ್ರಶೇಖರ್ ಕೋಟಾರ ಗಸ್ತ್ ಇನ್ನಿತರರು ಉಪಸ್ಥಿತರಿದ್ದರು

LEAVE A REPLY

Please enter your comment!
Please enter your name here