ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಗಿಲ್ಲ ಪರವಾನಿಗಿ

0
1032

ಕಲಬುರಗಿ, ಆಗಸ್ಟ. 17: ಆಗಸ್ಟ 22ರಂದು ಗಣೇಶ ಹಬ್ಬ ಇರುವುದರಿಂದ ಈ ಬಾರಿ ಸಾರ್ವಜನಿಕವಾಗಿ ಗಲ್ಲಿ, ಓಣಿ, ಮಾರುಕಟ್ಟೆ, ಅಲ್ಲದೇ ಹಲವಾರು ಬಡಾವಣೆಗಳಲ್ಲಿ ಶ್ರೀ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆಗೆಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ರಾಜ್ಯ ಸರಕಾರದ ಆದೇಶದನ್ವಯ ಕೋವಿಡ್ 19 ಇರುವದರಿಂದ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಿ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆ ಯಲ್ಲಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಈ ಆದೇಶ ಹೊರ ಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಬಿ. ಶರತ್ ಅವರು ತಿಳಿಸಿ ದ್ದಾರೆ.
ಸಾರ್ವಜನಿಕರು ಪಾರಂಪರAಗತವಾಗಿ ಆಚರಿಸುತ್ತ ಬಂದಿರುವ ಈ ಹಬ್ಬವನ್ನು ಮನೆಯಲ್ಲಿಯೇ ಆಗಲಿ, ಮಂದಿರ, ದೇವಸ್ಥಾನಗಳಲ್ಲಾಗಲಿ ಸರಳ ರೀತಿಯಿಂದ ಭಕ್ತಪೂರ್ವಕವಾಗಿ ಆಚರಿಸಲು ಸಹ ಅವರು ಸಲಹೆ ನೀಡಿದ್ದು, ಪ್ರತಿಷ್ಠಾಪನೆ ಮುಗಿದ ಬಳಿಕ ಮನೆಯಲ್ಲಿಯೇ ಗಣೇಶನನ್ನು ವಿಸರ್ಜಿಸಲು ಸಹ ಅವರು ಮನವಿ ಮಾಡಿಕೊಂಡಿದ್ದಾರೆ.
ಸಾರ್ವಜನಿಕವಾಗಿ ಗಣೇಶ ಪ್ರತಿಷ್ಠಾಪನೆಯ ಹಾಗೂ ವಿಸರ್ಜನೆಗಾ ಗಿ ಮೆರವಣಿಗೆ ಮಾಡುವುದು ನಿಷೇಧಿಸಿದ್ದು, ಬಾವಿ, ಕೆರೆ, ಹಳ್ಳ, ಕಲ್ಯಾಣಿಗಳಲ್ಲಿಯೂ ಸಹ ಗಣೇಶನ ಮೂರ್ತಿಗಳನ್ನು ವಿಸರ್ಜಿಸಲು ನಿಷೇಧ ಹೇರಲಾಗಿದೆ.
ದೇವಸ್ಥಾನಗಳಲ್ಲಿ ಗಣೇಶ ಪ್ರತಿಷ್ಠಾಪನೆಯ ಸಂದರ್ಭದಲ್ಲಿ ದಿನ ನಿತ್ಯ ದೇವಸ್ಥಾನ ಪೂರ್ತಿ ಸ್ಯಾನಿಟೈಸರ್ ಮಾಡಬೇಕು, ಬಂದ ಭಕ್ತರಿಗೆ ಥರ್ಮಲ್ ಸ್ಕೀನಿಂಗ್ ಮಾಡಬೇಕು. ಕನಿಷ್ಟ 6 ಅಡಿ ಸಾಮಾಜಿಕ ಅಂತರದೊAದಿಗೆ ಭಕ್ತರಿಗೆ ದರ್ಶನದ ವ್ಯವಸ್ಥೆಗೂ ಸಹ ಜಿಲ್ಲಾಡಳಿತ ಮನವಿ ಮಾಡಿದೆ.

LEAVE A REPLY

Please enter your comment!
Please enter your name here