ಕೋವಿಡ್-19 ಹಿನ್ನೆಲೆ: ಆಗಸ್ಟ್ 8 ರವರೆಗೆ ಎಲ್ಲ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತ

0
946

ಕಲಬುರಗಿ,ಆ,6-ಕೊರೋನಾ ವೈರಸ್ (ಕೋವಿಡ್-19) ಸಾಂಕ್ರಾಮಿಕ ರೋಗ ತಡೆಗಟ್ಟುವ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಲಬುರಗಿ ನಗರ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ನ್ಯಾಯಾಲಯಗಳ ಕಾರ್ಯಕಲಾಪ ಸ್ಥಗಿತವನ್ನು 2020ರ ಆಗಸ್ಟ್ 8 ರವರೆಗೆ ವಿಸ್ತರಿಸಲಾಗಿದೆ ಎಂದು ಕಲಬುರಗಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಆರ್.ಜೆ. ಸತೀಶ್ ಸಿಂಗ್ ಅವರು ತಿಳಿಸಿದ್ದಾರೆ.
ಈ ಅವಧಿಯಲ್ಲಿ ಯಾವುದೇ ನ್ಯಾಯಾಂಗ ಮತ್ತು ಇತರೆ ನ್ಯಾಯಾಂಗ ಹಾಗೂ ಆಡಳಿತಾತ್ಮಕ ಕೆಲಸ ಕಾರ್ಯಗಳನ್ನು ರದ್ದುಪಡಿಸಲಾಗಿದೆ. ಅದೇ ರೀತಿ ನ್ಯಾಯಾಲಯದಿಂದ 2020ರ ಜುಲೈ 31ರಂದು ಹೊರಡಿಸಿದ ಅಧಿಸೂಚನೆಯನ್ನು ಸಹ ರದ್ದುಪಡಿಲಾಗಿದೆ. ಈ ಅವಧಿಯಲ್ಲಿ ಕೇವಲ ತುರ್ತು ಕಲಾಪಗಳ ಪ್ರಕರÀಣಗಳನ್ನು ಇ-ಮೇಲ್ ಮಾತ್ರ ಸ್ವೀಕರಿಸಲಾಗುವುದು ಹಾಗೂ ವಿಡಿಯೋ ಕಾನ್ಫ್ರೆನ್ಸ್ (ದೃಶ್ಯ ಮಾಧ್ಯಮ) ಗಳ ಮೂಲಕ ಆಲಿಸಲಾಗುವುದು.

LEAVE A REPLY

Please enter your comment!
Please enter your name here