ವೀರಶೈವ ಮಹಿಳಾ ವಿದ್ಯಾರ್ಥಿ ವಸತಿ ನಿಲಯಕ್ಕೆ ಸೋಮವಾರ ಅಡಿಗಲ್ಲು ಸಮಾರಂಭ

0
1219

ಕಲಬುರಗಿ, ಆ. 2: ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಅಡಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯದ ಅಡಿಗಲ್ಲು ಸಮಾರಂಭ ನಾಳೆ ಸೋಮವಾರ ದಿನಾಂಕ 3.8.2020ರಂದು ಕೋಟನೂರ ಧರಿಯಾಪೂರ ಜಿ.ಡಿ.ಎ. ಲೇಔಟ್ ಬನಶಂಕರಿ ಆಸ್ಪತ್ರೆ ಹತ್ತಿರದ ರಾಮ ಮಂದಿರ ವೃತ್ತ ಸಮೀತ ಮಧ್ಯಾಹ್ನ 12.45ಕ್ಕೆ ನಡೆಯಲಿದೆ.
ಶ್ರೀ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿಗಳಾದ ಪರಮಪೂಜ್ಯ ಡಾ. ಶರಣಬಸಪ್ಪ ಅಪ್ಪ ಅವರು ಭೂಮಿ ಪೂಜೆ ನೆರವೇರಿಸಲಿದ್ದು, ಮುಗಳನಾಗಾವಿ ಕಟ್ಟಿಮಠ ಹಿರೇಮಠ ಸಂಸ್ಥಾನದ ಶ್ರೀ ಅಭಿನವ ಸಿದ್ಧಲಿಂಗ ಶಿವಾಚಾರ್ಯರ ದಿವ್ಯ ಸಾನಿಧ್ಯದ ಸಮಾರಂಭದ ಅಧ್ಯಕ್ಷತೆ ಯನ್ನು ಕೆಕೆಆರ್.ಡಿ.ಬಿ. ಅಧ್ಯಕ್ಷರೂ ಹಾಗೂ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ ವಹಿಸಲಿದ್ದಾರೆ.
ವಿಶೇಷ ಅತಿಥಿಗಳಾಗಿ ಅಖಿಲ ಭಾರತ ವೀರಶೈವ ಮಹಾಸಭಾದ ಕಾರ್ಯಾಧ್ಯಕ್ಷರು, ಮತ್ತು ರಾಷ್ಟಿçÃಯ ಪ್ರಧಾನ ಕಾರ್ಯದರ್ಶಿಯಾದ ಈಶ್ವರ ಖಂಡ್ರೆ ಅವರು ಆಗಮಿ ಸಲಿದ್ದಾರೆ. ಎಂದು ವೀರಶೈವ ಮಹಾಸಭಾದ ಅಧ್ಯಕ್ಷರಾದ ಡಾ. ಶರಣಕುಮಾರ ಮೋದಿ ಅವರು ತಿಳಿಸಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕರಾದ ವೆಂಕಟರೆಟ್ಟಿ ಮುದ್ನಾಳ, ಎಂ. ವೈ. ಪಾಟೀಲ, ಶರಣಬಸಪ್ಪ ದರ್ಶನಾಪೂರ, ರಾಜಕುಮಾರ ಪಾಟೀಲ ತೇಲ್ಕೂರ, ನಾಗಣಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯರುಗಳಾದ ಬಿ. ಜಿ. ಪಾಟೀಲ್, ಚಂದ್ರಶೇಖರ ಪಾಟೀಲ ಹುಮನಾಬಾದ, ಶರಣಬಸಪ್ಪ ಮಟ್ಟೂರ, ಮಾಜಿ ಸಂಸದ ಬಸವರಾಜ ಪಾಟೀಲ ಸೇಡಂ, ಮಾಜಿ ಶಾಸಕರಾದ ಡಾ. ಎ. ಬಿ. ಮಲಕರೆಡ್ಡಿ, ಡಾ. ಶರಣಪ್ರಕಾಶ ಪಾಟೀಲ, ಬಿ. ಜವಳಿ, ಬಿ. ಆರ್. ಪಾಟೀಲ್, ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಗುರು ಪಾಟೀಲ ಶಿರವಾಳ, ಶಶೀಲ ಜಿ. ನಮೋಶಿ, ಮಾಜಿ ವಿಧಾನ ಪರಿಷತ್ ಸದಸ್ಯರಾದ ಅಲ್ಲಮಪ್ರಭು ಪಾಟೀಲ, ಅಮರನಾಥ ಪಾಟೀಲ್, ಹೆಚ್.ಕೆ.ಇ. ಅಧ್ಯಕ್ಷರಾದ ಭೀಮಾಶಂಕರ ಬಿಲಗುಂದಿ, ಜಿ.ಪಂ. ಅಧ್ಯಕ್ಷರಾದ ಶ್ರೀಮತಿ ಸುವರ್ಣ ಮಾಲಾಜಿ, ಹೆಚಿ.ಕೆ.ಇ. ಮಾಜಿ ಅಧ್ಯಕ್ಷರಾದ ಬಸವರಾಜ ಭೀಮಳ್ಳಿ, ಬಸವರಾಜ ಹಾಗೂ ವಿದ್ಯಾರ್ಥಿನಿಯರ ನಿಲಯದ ಆರ್ಕಿಟೆಕ್ಚರ್ ಆದ ಬಸವರಾಜ ಖಂಡೇರಾವ ಅವರು ಆಗಮಿಸಲಿದ್ದಾರೆ.

LEAVE A REPLY

Please enter your comment!
Please enter your name here