ಬಕ್ರೀದ್: ಶಾಂತಿ ಭಗ್ನಕ್ಕೆ ಯತ್ನಿಸುವವರ ವಿರುದ್ಧ ಕ್ರಮಕ್ಕೆ ಚುಲ್‌ಬುಲ್ ಆಗ್ರಹ

0
1087

ಕಲಬುರಗಿ, ಜುಲೈ. 29: ಬಕ್ರೀದ್ ಪ್ರಯುಕ್ತ ಮುಸ್ಲಿಂ ಬಾಂಧವರು ಈದ್ ನಮಾಜ್ ಮಸೀದಿಯಲ್ಲಿ ಮಾಡಲಿದ್ದಾರೆ. ಈದ್ಗಾ ಮತ್ತು ಇನ್ನಿತರ ಸ್ಥಳದಲ್ಲಿ ನಮಾಜ್ ನಿರ್ವಹಿಸುವುದಿಲ್ಲ. ಜಿಲ್ಲೆಯಲ್ಲಿ ಶಾಂತಿಗೆ ಮತ್ತು ಸೌಹಾರ್ದತೆಗೆ ಭಂಗ ತರುವ ಯತ್ನ ನಡೆಸುವಂತಹ ವ್ಯಕ್ತಿಗಳ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಡಾ. ಮಹಮ್ಮದ್ ಅಜಗರ್ ಚುಲಬುಲ್ ಅವರು ಆಗ್ರಹಿಸಿದ್ದಾರೆ.
ಅವರು ಮಂಗಳವಾರ ರೋಜಾ ಪೊಲೀಸ್ ಠಾಣೆಯ ವತಿಯಿಂದ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ತ್ಯಾಗ ಮತ್ತು ಬಲಿದಾನದ ಸಂಕೇತವಾದಿ ಬಕ್ರೀದ್ ಹಬ್ಬ ಇದೇ ಅಗಸ್ಟ್ 1,2 ಮತ್ತು 3 ದಿನಗಳ ವರೆಗೆ ಆಚರಣೆ ಮಾಡಲಿದ್ದು, ಪ್ರತಿ ವರ್ಷದಂತೆ ಈ ವರ್ಷವು ಸಹ ಹಬ್ಬವನ್ನು ಸರಳ ಮತ್ತು ಶಾಂತ ರೀತಿಯಲ್ಲಿ ಸರಕಾರ, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ಮಾರ್ಗ ಸೂಚಿಯಂತೆ ಹಬ್ಬ ಆಚರಣೆ ಮಾಡಲಾಗುವುದೆಂದು ಅವರು ತಿಳಿಸಿದ್ದಾರೆ.
ವಿಶ್ವದಾದ್ಯಂತ ಕೊರೊನಾ ಹಾವಳಿ ಹೆಚ್ಚಾಗಿದ್ದು, ಕೋವಿಡ್-19 ನಿಯಮ ಪಾಲಿಸಿ ಹಬ್ಬ ಆಚರಣೆ ಮಾಡಲಿದ್ದೇವೆ, ಆದರೆ ಇದರಲ್ಲಿ ಪೊಲೀಸ್ ಮತ್ತು ಮಹಾನಗರ ಪಾಲಿಕೆಯ ಸಹಕಾರ ಮುಖ್ಯವಾಗಿದೆ ಎಂದು ಹೇಳಿದರು.
ಸಭೆಯಲ್ಲಿ ಉಪ ಪೊಲೀಸ್ ಆಯುಕ್ತರಾದ ಕಿಶೋರ್ ಬಾಬು ಮಾತನಾಡಿ, ಮುಸ್ಲಿಂ ಬಾಂದವರಿಗೆ ಹಿಂದೆ ಯಾವ ರೀತಿ ಸಹಕಾರ ನೀಡಲಾಗಿದೆ ಅದೇ ರೀತಿ ಈ ಬಾರಿಯು ಇಲಾಖೆ ವತಿಯಿಂದ ಸಹಕಾರ ನೀಡಲಿದೆ. ಆದರೆ, ಎಲ್ಲರು ಕಡ್ಡಾಯವಾಗಿ ಅಲ್ಪಸಂಖ್ಯಾತರ ಇಲಾಖೆಯ ಸುತ್ತೊಲೆಯನ್ನು ಪಾಲಿಸಬೇಕೆಂದು ಸೂಚಿಸಿದರು.
ಈ ವೇಳೆಯಲ್ಲಿ ಸಹಾಯಕ ಆಯುಕ್ತರಾದ ಗಿರೀಶ್ ಸುಬೇದಾರ, ವಿಜಯಕುಮಾರ, ಸಿಪಿಐ ಅಸ್ಲಂ ಬಾಷಾ, ಅಬ್ದುಲ್ ರಹೀಮ್ ಮಿರ್ಚಿ, ಅತೀಕ್, ಏಜಾಜ್, ಮೌಲಾನ ನೂಹ, ಶರಣು, ಅಮೃತ್ ಸಾಗರ, ಸೇರಿದಂತೆ ಇನ್ನಿತರರು ಶಾಂತಿ ಸಭೆಯಲ್ಲಿ ಭಾಗವಹಿಸಿದರು.

LEAVE A REPLY

Please enter your comment!
Please enter your name here