ಕೊರೊನಾಗೆ ಪುಲ್ಸಟಾಪ್ ಹಾಕಲು ಸಂಡೇ ಕಂಪ್ಲಿಟ್ ಲಾಕ್‌ಡೌನ್

0
1053

ಕಲಬುರಗಿ, ಜು. ೦೪: ದಿನದಿಂದ ದಿನಕ್ಕೆ ಹೆಚ್ಚು ಕೋವಿಡ್ ಪ್ರಕರಣ ಕಾಣಿಸಿಕೊಳ್ಳುತ್ತಿದ್ದು, ಈ ನಾಗಾಲೋಟಕ್ಕೆ ಸಂಪೂರ್ಣವಾಗಿ ತಡೆಯೊಡ್ಡಲು ಸಾಧ್ಯವಾಗದಿದ್ದರೂ ಕೂಡಾ ಕೊಂಚ ರಿಲೀಫ್ ಗಾಗಿ ಈಗಾಗಲೇ ನಿಗದಿಯಾದಂತೆ ಜುಲೈ ೨ರಿಂದ ಆಗಸ್ಟ್ ೦೧ರ ವರೆಗೆ ರಾಜ್ಯದಾದ್ಯಂತ ಸಂಪೂರ್ಣ ರವಿವಾರ ಲಾಕ್‌ಡೌನ್ ಸರಕಾರ ಘೋಷಿಸಿದ್ದು. ಪ್ರಥಮ ರವಿವಾರ ದಿನಾಂಕ ೫ರಂದು ಕಲಬುರಗಿ ಜಿಲ್ಲೆ ಸಂಪೂರ್ಣ ಲಾಕ್‌ಡೌನ್ ಆಗಲಿದೆ.
ದಿನನಿತ್ಯದ ಹಾಲು, ತರಕಾರಿ ಸೇರಿದಂತೆ ಅವಶ್ಯಕ ವಸ್ತು ಗಳಿಗೆ ವಿನಾಯಿತಿ ನೀಡಲಾಗಿದೆ.
ಮೇಡಿಕಲ್ ಶಾಪೀಗಳು ಎಂದಿನAತೆ ತೆರೆದಿರುತ್ತವೆ. ಬಾರ್, ಮಾಂಸದ ಅಂಗಡಿ ಸೇರಿದಂತೆ ಇತರ ಎಲ್ಲಾ ಅಂಗಡಿ ಮುಂಗಟ್ಟು ಗಳು ಸಂಪೂರ್ಣ ಲಾಕ್‌ಡೌನ್ ಆಗಿರುತ್ತವೆ.
ಆಟೋ, ಕ್ಯಾಬ್, ಟ್ಯಾಕ್ಸಿಗಳು ಮತ್ತು ದ್ವೀಚಕ್ರವಾಹನಗಳ ಓಡಾಟ ಸಂಪೂರ್ಣ ಸ್ಥಗೀತ. ಅನವಶ್ಯಕ ಓಡಾಡಿದರೆ ದಂಡ ಬಿಳುವುದು ಗ್ಯಾರಂಟಿ.
ರವಿವಾರ ಲಾಕ್‌ಡೌನ್‌ನಿಂದಾಗಿ ಎಲ್ಲಾ ಬಾರ್, ವೈನ್ಸ್ ಶಾಪೀಗಳಲ್ಲಿ ಎಣ್ಣೆ ಪ್ರೀಯರು ಕ್ಯೂ ನಿಂತು ಪಾರ್ಸ್ಲ್ ಪಡೆ ಯುತ್ತಿದ್ದ ದೃಶ್ಯಗಳು ಕಲಬುರಗಿ ನಗರದಲ್ಲಿ ಎಲ್ಲಡೆ ಕಂಡು ಬಂದವು.

LEAVE A REPLY

Please enter your comment!
Please enter your name here